ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗನನ್ನು ಸ್ಟ್ರಾಲರ್ನಲ್ಲಿ ತಳ್ಳುತ್ತಾ 10 ಕಿ.ಮೀ. ಓಡುವ ಮೂಲಕ ನೂತನ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡಿನ ಹೀದರ್ ಹಾನ್ ಎಂಬ ಮಹಿಳೆ, ಈ ಸಾಧನೆ ಮಾಡಿದ್ದಾರೆ. 36 ವರ್ಷದ ಹೀದರ್ ತನ್ನ ಒಂದು ವರ್ಷದ ಮಗನನ್ನು ಸ್ಟ್ರಾಲರ್ನಲ್ಲಿ ತಳ್ಳುತ್ತಾ 10 ಕಿ.ಮೀ ದೂರವನ್ನು ಕೇವಲ 50 ನಿಮಿಷ 4 ಸೆಕೆಂಡುಗಳಲ್ಲಿ ತಲುಪಿದ್ದಾರೆ.
ಸೇಂಟ್ ಆಲ್ಬನ್ಸ್ನ ಹೆಮೆಲ್ ಹೆಂಪ್ಸ್ಟೆಡ್ನಲ್ಲಿ ನಡೆದ ಹರ್ಟ್ಸ್ ಫಾಸ್ಟ್ 10 ಕಿ.ಮೀ. ರೇಸ್ನಲ್ಲಿ ತನ್ನ ಮಗನನ್ನು ಸ್ಟ್ರಾಲರ್ನಲ್ಲಿ ತಳ್ಳುತ್ತಾ ವೇಗವಾಗಿ ಗುರಿ ತಲುಪಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, 36 ವರ್ಷ ವಯಸ್ಸಿನ ಹೀದರ್ ಹಾನ್, ತನ್ನ ಮಗುವಿನೊಂದಿಗೆ ಓಡುತ್ತಿರುವುದು ಇದೇ ಮೊದಲಲ್ಲ. ಆಕೆ ತನ್ನ ಮೊದಲ ಮಗುವಿನ ಜನನದ ನಂತರ ಸ್ಟ್ರೋಲರ್ ನ್ನು ತಳ್ಳುತ್ತಾ ಓಡಲು ಪ್ರಾರಂಭಿಸಿದ್ದರು.
ಇನ್ನು ಇವರ ದಾಖಲೆಯನ್ನು ಗಿನ್ನಿಸ್ ಅನುಮೋದಿಸಿರುವುದು ಹೀದರ್ ಗೆ ಖುಷಿ ತಂದಿದೆ. ಇದು ಚಂದ್ರನ ಮೇಲೆ ಹೋದಷ್ಟೇ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ತನ್ನ ವಿಶ್ವದಾಖಲೆಯನ್ನು ಮುರಿಯಲು ಇತರರನ್ನು ಪ್ರೇರೇಪಿಸುವುದಾಗಿ ಹೀದರ್ ಹಾನ್ ಹೇಳಿದ್ದಾರೆ.