alex Certify ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಪರೂಪದ ಕಪ್ಪು ಚಿರತೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಪರೂಪದ ಕಪ್ಪು ಚಿರತೆ ಪತ್ತೆ

ಪಶ್ಚಿಮ ಬಂಗಾಳದ ಅಲಿಪುರ್‌ದಾರ್‌ನಲ್ಲಿರುವ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ಕಪ್ಪು ಚಿರತೆ ಕಾಣಿಸಿಕೊಂಡಿದೆ. ಕ್ಯಾಮರಾ ಟ್ರ್ಯಾಪ್ ನಲ್ಲಿ ಈ ಅಪರೂಪದ ಕಪ್ಪು ಚಿರತೆ ಫೋಟೋವನ್ನು ಸೆರೆಹಿಡಿಯಲಾಗಿದೆ.

ಕರ್ನಾಟಕದ ಕಬಿನಿ ವನ್ಯಜೀವಿ ಅಭಯಾರಣ್ಯ ಮತ್ತು ತಮಿಳುನಾಡಿನ ನೀಲಗಿರಿ ಬಯೋಸ್ಫಿಯರ್ ರಿಸರ್ವ್ ಎರಡು ವನ್ಯಜೀವಿ ಸಂರಕ್ಷಿತ ಪ್ರದೇಶಗಳಾಗಿವೆ. ಇಲ್ಲಿ ಕಪ್ಪು ಚಿರತೆಗಳು ಕಾಣಸಿಗುತ್ತವೆ. ಆದರೆ, ಬಕ್ಸಾ ಹುಲಿ ರಕ್ಷಿತಾರಣ್ಯದಲ್ಲಿ ಕೂಡ ಒಂದು ಕಪ್ಪುಚಿರತೆ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಬಕ್ಸಾ ಟೈಗರ್ ರಿಸರ್ವ್ ಭಾರತದ ಉತ್ತರ ಪಶ್ಚಿಮ ಬಂಗಾಳದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, 760 ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಅಧಿಕೃತ ವರದಿಗಳ ಪ್ರಕಾರ, ಇದು ಕನಿಷ್ಠ 284 ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ ಹಾಗೂ ಏಷ್ಯಾದ ಆನೆ, ಗೌರ್, ಜಿಂಕೆ, ಭಾರತೀಯ ಚಿರತೆ ಸೇರಿದಂತೆ ವಿವಿಧ ಸಸ್ತನಿಗಳು ಇಲ್ಲಿ ವಾಸಿಸುತ್ತಿವೆ.

ಮೀಸಲು ಪ್ರದೇಶದ ಜೀವವೈವಿಧ್ಯವನ್ನು ನೋಡಲು, ವರ್ಷದ ವಿವಿಧ ಸಮಯಗಳಲ್ಲಿ ಕ್ಯಾಮರಾ ಟ್ರ್ಯಾಪ್‌ಗಳನ್ನು ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಅಧಿಕಾರಿಗಳು ಮತ್ತು ಸಂರಕ್ಷಣಾ ತಜ್ಞರು ಕ್ಯಾಮರಾ ಟ್ರ್ಯಾಪ್‌ಗಳಲ್ಲಿ ಹುಲಿಗಳ ಫೋಟೋಗಳನ್ನು ನಿರೀಕ್ಷಿಸಿದ್ದರೆ, ಅವರಿಗೆ ಕಪ್ಪುಚಿರತೆಯ ದರ್ಶನವಾಗಿದೆ.

ಇನ್ನು ಕಪ್ಪು ಚಿರತೆ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ನಂತರ ತ್ವರಿತವಾಗಿ ವೈರಲ್ ಆಗಿದ್ದು, ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

— Ananya Bhattacharya (@ananya116) November 13, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...