ನಾಯಿಮರಿಗಳ ಕ್ಯೂಟ್ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಇದೀಗ ನಾಯಿಮರಿ ಹಾಗೂ ಯುವಕ ಮಾಡಿರುವ ಡ್ಯಾನ್ಯ್ ವಿಡಿಯೋ ನೋಡಿದ್ರೆ, ಖಂಡಿತಾ ನಿಮಗೆ ಖುಷಿ ತರಿಸುತ್ತೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, 2.4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಯುವಕನೊಂದಿಗೆ ಪುಟ್ಟ ಪಗ್ ಆಡುವುದನ್ನು ವಿಡಿಯೋದಲ್ಲಿ ನೋಡಬಹುದು.
ನಾಯಿಮರಿಯು ಯುವಕ ಯಾವ ರೀತಿ ಡ್ಯಾನ್ಸ್ ಮಾಡುತ್ತಾನೋ ಅದೇ ರೀತಿ ನಕಲು ಮಾಡಿರುವ ಕ್ಯೂಟೆಸ್ಟ್ ವಿಡಿಯೋ ಇದಾಗಿದೆ. ಯುವಕ ಸ್ಟೆಪ್ಸ್ ಹಾಕುವಾಗ ಹಾರಿ ತಿರುಗಿದ್ದಾನೆ. ಆತನನ್ನೇ ನೋಡಿದ ಪುಟ್ಟ ಪಗ್, ತಾನು ಕೂಡ ತಿರುಗುವ ಮೂಲಕ ಯುವಕನನ್ನು ಅನುಕರಿಸುತ್ತದೆ. ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಡಾನ್ಸ್ ಬ್ಯಾಟಲ್ ವಿತ್ ಎ ಪಪ್ಪಿ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಈ ವಿಡಿಯೋ ಮಾತ್ರ ಇಂಟರ್ನೆಟ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, 20,000 ಕ್ಕೂ ಹೆಚ್ಚು ಲೈಕ್ ಗಳು ಮತ್ತು 3,300 ರೀಟ್ವೀಟ್ಗಳು ಬಂದಿವೆ. ಈ ಮುದ್ದಾದ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಖುಷಿಯಾಗಿದ್ದು, ಉಲ್ಲಾಸದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
https://twitter.com/buitengebieden_/status/1458506993996554247?ref_src=twsrc%5Etfw%7Ctwcamp%5Etweetembed%7Ctwterm%5E1458506993996554247%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-man-and-tiny-puppy-pug-dance-off-battle-cute-trending-watch-5094892%2F