ರಾಯಚೂರು: ಇಲ್ಲಿಯ ನಗರಸಭೆಯ ಡೇ-ನಲ್ಮ್ ವಿಭಾಗದ ವತಿಯಿಂದ ದಿ ದಯಾಳ್ ಅಂತ್ಯೋದಯ ಯೋಜನೆಯ ನಲ್ಮ್ ಅಭಿಯಾನ ಅಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಈಗಾಗಲೇ 10,000 ರೂ.ಗಳ ಸಾಲ ಪಡೆದಿದ್ದು, ಸಾಲ ಮರುಪಾವತಿಸಿ ಹೆಚ್ಚಿನ ಸಾಲವನ್ನು ಪಡೆದುಕೊಂಡು ತಮ್ಮ ವ್ಯಾಪಾರವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕಾಗಿದೆ.
ಬೀದಿ ಬದಿ ವ್ಯಾಪಾರಸ್ಥರಿಗೆ ಬ್ಯಾಂಕುಗಳ ಮೂಲಕ ಆತ್ಮ ನಿರ್ಭರ ನಿಧಿ ಯೋಜನೆಯಡಿಯಲ್ಲಿ 10,000 ರೂ. ಸಾಲವನ್ನು ನೀಡಲಾಗಿತ್ತು, ಬೀದಿ ಬದಿ ವ್ಯಾಪಾರಸ್ಥರುಗಳು ಬ್ಯಾಂಕಿಗೆ ಮರುಪಾವತಿಸುವ ಮೂಲಕ 20,000 ರೂ. ಗಳನ್ನು ಮಂಜೂರು ಮಾಡಲು ಕೇವಲ 40 ಅರ್ಜಿಗಳು ಬಂದಿರುವುದರಿAದ ಪುನಃ ಪ್ರಕಟಣೆ ನೀಡಲಾಗಿದೆ.
ಬೀದಿ ವ್ಯಾಪಾರಿಗಳು ಈ ಹಿಂದೆ ಸಾಲ ಮರುಪಾವತಿ ಮಾಡಿ ಬ್ಯಾಂಕಿನಿಂದ ಪ್ರಮಾಣ ಪತ್ರ ಮತ್ತು ಸ್ಟೇಟ್ ಮೆಂಟ್ ಅರ್ಜಿಯನ್ನು ಲಗತ್ತಿಸಿ ನಗರಸಭೆ ಕಾರ್ಯಾಲಯದ ಸಮುದಾಯ ಸಂಘಟನಾಧಿಕಾರಿಯಾದ ಓಂಪ್ರಕಾಶ್ ಅವರಿಗೆ ಡಿ.12 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.