ಹೆಬ್ಬಾವೊಂದು ಮರ ಏರುವ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೆ ವೈರಲ್ ಆಗಿದೆ. ಉದ್ದವಾದ ಭಾರಿ ತೂಕದ ಹೆಬ್ಬಾವು ಅಡಿಕೆ ಮರದ ಮೇಲೆ ಏರಲು ಆಕರ್ಷಕ ತಂತ್ರವನ್ನು ಬಳಸಿರುವುದು ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಆಗ್ನೇಯ ಏಷ್ಯಾದಲ್ಲಿ ತೆಗೆಯಲಾಗಿರುವ ವಿಡಿಯೋ ಇದು ಎಂದು ಹೇಳಲಾಗಿದ್ದು, ಸುಮಾರು ಐದು ವರ್ಷಗಳಷ್ಟು ಹಳೆಯದು.
ವಿಡಿಯೋದಲ್ಲಿ ಕಂಡುಬರುವ ಹಾವು ರೆಟಿಕ್ಯುಲೇಟೆಡ್ ಹೆಬ್ಬಾವು ಆಗಿದ್ದು, ಇದು ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಒಂದಾಗಿದೆ. ಇದು 1.5 ರಿಂದ 6.5 ಮೀ (4.9 ರಿಂದ 21.3 ಅಡಿ) ಮತ್ತು 75 ಕೆಜಿ ತೂಕದವರೆಗೆ ಬೆಳೆಯುವ ವಿಶ್ವದ ಅತಿ ಉದ್ದವಾದ ಸರೀಸೃಪವಾಗಿದೆ. ಇಷ್ಟೊಂದು ಉದ್ದ ಮತ್ತು ತೂಕ ಹೊಂದಿರುವ ಹಾವುಗಳಿಗೆ ಮರಗಳು ಅಥವಾ ಮೇಲ್ಮೈಗಳನ್ನು ಹತ್ತುವುದು ಕಷ್ಟಕರವಾಗಿರುತ್ತದೆ.
ʼಜನ್ ಧನ್ʼ ಖಾತೆ ಹೊಂದಿದವರು ಈಗ್ಲೇ ಮಾಡಿ ಈ ಕೆಲಸ..!
ವಿಡಿಯೋದಲ್ಲಿ, ಬೃಹತ್ ಹೆಬ್ಬಾವು ಮಂತ್ರಮುಗ್ಧಗೊಳಿಸುವ ರೀತಿಯಲ್ಲಿ ಎತ್ತರದ ಅಡಿಕೆ ಮರವನ್ನು ಏರುತ್ತದೆ. ಹಾವು ದಟ್ಟವಾದ ಮರದ ತೊಗಟೆಗೆ ಸುತ್ತಿಕೊಳ್ಳುವುದು, ನಂತರ ತನ್ನ ತಲೆಯನ್ನು ಮೇಲಕ್ಕೆತ್ತುತ್ತಾ ಮರದ ಮೇಲೆ ಏರಿದೆ. ಹೀಗೆಯೇ ನಿಧಾನವಾಗಿ ಹಂತ-ಹಂತವಾಗಿ ಹೆಬ್ಬಾವು ಮರವನ್ನು ಏರುತ್ತಾ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ಹಳೆ ವಿಡಿಯೋ ಮತ್ತೆ ಸದ್ದು ಮಾಡಿದ್ದು, ನೆಟ್ಟಿಗರು ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.