ಮೈಸೂರು: ಶಾಸಕ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಿಟಿಡಿ ಕುಟುಂಬಕ್ಕೆ ಜೆಡಿಎಸ್ ನೀಡಿದ್ದ ಪರಿಷತ್ ಟಿಕೆಟ್ ಆಫರ್ ನ್ನು ಜಿ.ಟಿ.ದೇವೇಗೌಡರು ನಿರಾಕರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಜಿ.ಟಿ.ದೇವೇಗೌಡ, ನನ್ನ ಕುಟುಂಬದಿಂದ ವಿಧಾನ ಪರಿಷತ್ ಚುನಾವಣೆಗೆ ಯಾರೂ ಸ್ಪರ್ಧಿಸಲ್ಲ. ಜೆಡಿಎಸ್ ನವರು ನನ್ನನ್ನು ಬಿಟ್ಟು ತುಂಬಾ ವರ್ಷ ಕಳೆದಿದೆ. ನನ್ನ ಬಿಟ್ಟು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಧ್ಯಕ್ಷರ ನೇಮಕ ಮಾಡಿದ್ದಾರೆ. ಸಮಯ ಬಂದಾಗ ಎಲ್ಲವನ್ನೂ ವಿವರಿಸುತ್ತೇನೆ ಎಂದು ಹೇಳಿದರು.
BIG NEWS: ಶ್ರೀಕಿ ಪರಿಚಯವಿದ್ದದ್ದು ನಿಜ; ಆದರೆ ಬಿಟ್ ಕಾಯಿನ್ ವ್ಯವಹಾರದಲ್ಲಿ ನಾನಿಲ್ಲ ಎಂದ ಮೊಹಮ್ಮದ್ ನಲಪಾಡ್
ನನ್ನ ಗಮನಕ್ಕೆ ತಾರದೇ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದು ಹೋಗಿದ್ದಾರೆ. ಪಕ್ಷದಲ್ಲಿನ ಕೆಲಸಗಳ ಬಗ್ಗೆ ನನ್ನ ಗಮನಕ್ಕೆ ತರುವುದೂ ಇಲ್ಲ ಹೀಗಿರುವಾಗ ಈಗ ಜೆಡಿಎಸ್ ನಾಯಕರು ಈ ಹೇಳಿಕೆ ನೀಡುವುದರಿಂದ ಪ್ರಯೋಜನವಿಲ್ಲ. ನನ್ನ ಕುಟುಂಬದಿಂದ ಯಾರೂ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಷತ್ ಚುನಾವಣೆಗೆ ಜಿ.ಟಿ.ದೇವೇಗೌಡರ ಪತ್ನಿ ಲಲಿತಾ ದೇವೇಗೌಡರಿಗೆ ಟಿಕೆಟ್ ನೀಡಲು ಜೆಡಿಎಸ್ ಚಿಂತನೆ ನಡೆಸಿತ್ತು. ಜಿ.ಟಿ.ಡಿ ನೇತೃತ್ವದಲ್ಲೇ ಎಂ.ಎಲ್.ಸಿ ಚುನಾವಣೆ ನಡೆಯಲಿದೆ. ಅವರ ಕುಟುಂಬದಿಂದಲೇ ಅಭ್ಯರ್ಥಿಯಾಗಬೇಕೆಂಬುದು ನಮ್ಮ ಬಯಕೆ ಎಂದು ಶಾಸಕ ಸಾ.ರಾ,ಮಹೇಶ್ ಹೇಳಿದ್ದರು.