ವಾಟ್ಸಾಪ್ನಲ್ಲಿ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಈಗಾಗಲೇ ಸಾಕಷ್ಟು ವೈಶಿಷ್ಟ್ಯವನ್ನು ನೀಡಲಾಗಿದೆ. ಈ ಅಪ್ಲಿಕೇಶನ್ನಲ್ಲಿ ಲಾಸ್ಟ್ ಸೀನ್ ಎಂಬ ಆಯ್ಕೆಯ ಬಗ್ಗೆ ನೀವು ತಿಳಿದಿರುತ್ತೀರಾ. ನೀವು ಕೊನೆಯ ಬಾರಿಗೆ ಎಷ್ಟು ಸಮಯದವರೆಗೆ ಆನ್ಲೈನ್ ಇದ್ದೀರಿ ಎಂದು ತೋರಿಸುವ ಈ ಆಯ್ಕೆಯನ್ನು ನೀವು ಬಳಸಿಕೊಳ್ಳಬಹುದು ಅಥವಾ ಯಾರಿಗೂ ಕಾಣದಂತೆ ಮಾಡಿಕೊಳ್ಳಬಹುದಾಗಿತ್ತು. ಆದರೆ ಇದೀಗ ಈ ವೈಶಿಷ್ಟ್ಯದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ತರಲು ವಾಟ್ಸಾಪ್ ಮುಂದಾಗಿದೆ.
ಹೊಸ ಅಪ್ಡೇಟ್ನ ಪ್ರಕಾರ ನೀವಿಷ್ಟ ಪಟ್ಟ ಕ್ಯಾಂಟಾಕ್ಟ್ಗಳಿಗೆ ಮಾತ್ರ ನೀವು ಲಾಸ್ಟ್ ಸೀನ್ ಆಯ್ಕೆಯನ್ನು ಮರೆ ಮಾಡಬಹುದಾಗಿದೆ. ಈ ಆಯ್ಕೆಯನ್ನು ನೀವು ಸೆಟ್ಟಿಂಗ್ಸ್ >ಅಕೌಂಟ್ > ಪ್ರೈವಸಿ> ಲಾಸ್ಟ್ ಸೀನ್ ಎಂಬಲ್ಲಿ ಪಡೆಯಬಹುದಾಗಿದೆ.
ಹೆಚ್ಚಿನ ಆಯ್ಕೆಗಳನ್ನು ನೀಡುವ ಈ ಹೊಸ ವೈಶಿಷ್ಟ್ಯವು ಅಪ್ಲಿಕೇಶನ್ ಬೀಟಾ ಆವೃತ್ತಿಯಲ್ಲಿ ನೀಡಲಾಗಿದೆ. ಇದರಿಂದ ತೀರಾ ಕಿರಿಕಿರಿ ಎನ್ನಿಸುವ ಕಾಂಟ್ಯಾಕ್ಟ್ಗಳಿಗೆ ಮಾತ್ರ ನೀವು ನಿಮ್ಮ ಲಾಸ್ಟ್ ಸೀನ್ನ್ನು ಮರೆಮಾಚಬಹುದು. ಸದ್ಯಕ್ಕೆ ವಾಟ್ಸಾಪ್ನಲ್ಲಿ ಲಾಸ್ಟ್ ಸೀನ್ನಲ್ಲಿ ಕೇವಲ ಮೂರು ಆಯ್ಕೆಗಳು ಮಾತ್ರ ಇವೆ. ಮುಂದಿನ ದಿನಗಳಲ್ಲಿ ಈ ಹೊಸ ವೈಶಿಷ್ಟ್ಯ ಕೂಡ ಸ್ಥಾನ ಪಡೆಯಲಿದೆ.