
ಆದರೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಫೇಲ್ ಆಗುವುದು ಹೇಗೆ ಎಂದು ಹೇಳುವ ವಿಷಯದ ತುಣುಕನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ತಾನೇ..! ಇದೀಗ, ಪರೀಕ್ಷೆಯಲ್ಲಿ ಫೇಲ್ ಆಗುವುದು ಹೇಗೆ ಎಂಬ ಬಗ್ಗೆ 2009ರ ಬ್ಯಾಚ್‌ನ ಛತ್ತೀಸ್‌ಗಢ್ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಯುಪಿಎಸ್ಸಿಯಲ್ಲಿ ಅನುತ್ತೀರ್ಣವಾಗಲು ಬಯಸಿದರೆ ಏನು ಮಾಡಬೇಕು ಎಂಬುದನ್ನು ಹೇಳಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ತಿಂಗಳ ಕೊನೆಯಲ್ಲಿ ಕೈನಲ್ಲಿ ಹಣ ನಿಲ್ಲುತ್ತಿಲ್ವಾ……? ಅನುಸರಿಸಿ ಈ ಸೂತ್ರ….!
ವಿಡಿಯೋದಲ್ಲಿ, ಅಧಿಕಾರಿಯು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೇಗೆ ವಿಫಲರಾಗಬಹುದು ಎಂಬುದರ ಕುರಿತು ಹಲವಾರು ಸಲಹೆಗಳನ್ನು ಹೇಳಿಕೊಟ್ಟಿದ್ದಾರೆ. ನಿಮ್ಮ ಕಾರ್ಯತಂತ್ರವನ್ನು ಆಗಾಗ್ಗೆ ಬದಲಾಯಿಸಿ ಇದರಿಂದ ಪರೀಕ್ಷೆಯಲ್ಲಿ ಅನುತ್ತೀರ್ಣವಾಗಬಹುದು ಎಂದು ಮೊದಲನೇ ಸಲಹೆ ಕೊಟ್ಟಿದ್ದಾರೆ. ನಂತರ ಕೋಚಿಂಗ್ ಕ್ಲಾಸ್ ಗಳಿಗೆ ಹೋಗುವುದನ್ನು ತಪ್ಪಿಸಬೇಕು. ಪ್ರತಿದಿನ 6 ಗಂಟೆಗಳ ಕಾಲ ವೃತ್ತಪತ್ರಿಕೆ ಓದಬೇಕು. ಯಾವುದೇ ಮದುವೆ, ಹಬ್ಬ ಮತ್ತು ಕುಟುಂಬ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳಬೇಡಿ ಎಲ್ಲದಕ್ಕೂ ಹಾಜರಾಗಿ. ಅಲ್ಲದೆ ಎಂದಿಗೂ ಪ್ರಯತ್ನವನ್ನೇ ಮಾಡಬೇಡಿ. ಅಂದುಕೊಂಡಿದ್ದನ್ನು ಮಾಡುವುದನ್ನು ಬಹಳಷ್ಟು ಮುಂದೂಡಿದ್ರೆ ಖಂಡಿತಾ ಪರೀಕ್ಷೆಯಲ್ಲಿ ಪಾಸ್ ಆಗುವುದಿಲ್ಲ ಎಂಬಂತಹ ಸಲಹೆಗಳನ್ನು ಅಧಿಕಾರಿ ನೀಡಿದ್ದಾರೆ.
ಸಲಹೆಯನ್ನು ಪಾಯಿಂಟ್ಸ್ ರೀತಿ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅಧಿಕಾರಿ, ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಫೇಲ್ ಆಗುವುದು ಹೇಗೆ. ಚೆನ್ನಾಗಿ ವಿವರಿಸಲಾಗಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋವನ್ನು ರಿವರ್ಸ್ ಸೈಕಾಲಜಿ ಅಂತಾ ಕರೆಯುತ್ತಾರೆ. ಪರೀಕ್ಷೆಯ ತಯಾರಿಯ ದಿನಗಳಲ್ಲಿ ಅಭ್ಯರ್ಥಿಗಳು ಮಾಡುವ ತಪ್ಪುಗಳ ಬಗ್ಗೆ ಇಲ್ಲಿ ವ್ಯಂಗ್ಯವಾಗಿ ಹೇಳಲಾಗಿದೆ. ಆದ್ದರಿಂದ, ನೀವು ಯಶಸ್ಸು ಸಾಧಿಸಬೇಕು ಎಂದುಕೊಂಡಲ್ಲಿ ಈ ಸಲಹೆಗಳ ವಿರುದ್ಧವಾಗಿ ತಯಾರಿ ನಡೆಸಬೇಕಾಗುತ್ತದೆ.