alex Certify ‘ಹಿಂದುತ್ವವೆಂದರೆ ಮುಸ್ಲಿಂ ಹಾಗೂ ಸಿಖ್​ರನ್ನು ಮಣಿಸುವುದು’: ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್​ ಗಾಂಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಿಂದುತ್ವವೆಂದರೆ ಮುಸ್ಲಿಂ ಹಾಗೂ ಸಿಖ್​ರನ್ನು ಮಣಿಸುವುದು’: ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್​ ಗಾಂಧಿ

ಹಿಂದುತ್ವ ಹಾಗೂ ಆರ್​​ಎಸ್​ಎಸ್​ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರ ಹಾಕಿದ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಿಜೆಪಿಯ ದ್ವೇಷದ ಸಿದ್ಧಾಂತವು ಕಾಂಗ್ರೆಸ್​​ನ ಪ್ರೀತಿ ಹಾಗೂ ರಾಷ್ಟ್ರೀಯವಾದದ ಸಿದ್ಧಾಂತವನ್ನು ಮರೆಮಾಚುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್​ನ ಜನ ಜಾಗರಣ ಅಭಿಯಾನವನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಕಾಂಗ್ರೆಸ್​ ತನ್ನ ಸಿದ್ಧಾಂತವನ್ನು ಬಿಜೆಪಿಯಂತೆ ಎಂದಿಗೂ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿರಲಿಲ್ಲ ಎಂದು ಹೇಳಿದ್ರು.

ನಾವು ಇಷ್ಟ ಪಡುತ್ತೇವೋ ಇಲ್ಲವೋ ಎಂಬುದು ಸಂಬಂಧವೇ ಇಲ್ಲದಂತೆ ಆರ್​ಎಸ್​ಎಸ್​ ಹಾಗೂ ಬಿಜೆಪಿ ದ್ವೇಷದ ಸಿದ್ದಾಂತವು ಕಾಂಗ್ರೆಸ್​ನ ಪ್ರೀತಿ, ವಾತ್ಸಲ್ಯ ಹಾಗೂ ರಾಷ್ಟ್ರೀಯವಾದದ ಸಿದ್ಧಾಂತವನ್ನು ಮರೆಮಾಚಿದೆ. ನಾವು ಇದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ನಮ್ಮ ಸಿದ್ಧಾಂತವು ಎಷ್ಟೊಂದು ರೋಮಾಂಚನಕಾರಿಯಾಗಿದ್ದರೂ ಸಹ ಅದು ಮರೆಯಲ್ಲಿದೆ. ನಾವು ನಮ್ಮ ಸಿದ್ಧಾಂತಗಳನ್ನು ಆಕ್ರಮಣಕಾರಿಯಾಗಿ ಪ್ರಚಾರ ಮಾಡಲೇ ಇಲ್ಲ. ಹೀಗಾಗಿ ಅದು ಮರೆಮಾಚಿದೆ ಎಂದು ಹೇಳಿದ್ರು.

ಹಿಂದೂ ಧರ್ಮ ಹಾಗೂ ಹಿಂದುತ್ವದ ನಡುವಿನ ವ್ಯತ್ಯಾಸದ ಬಗ್ಗೆಯೂ ಇದೇ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ಹಾಗೂ ಹಿಂದುತ್ವದ ನಡುವಿನ ವ್ಯತ್ಯಾಸಗಳೇನು..? ಇವೆರಡೂ ಒಂದೇ ವಿಷಯವೇ..? ಅವು ಒಂದೇ ಆಗಿದ್ದರೆ ಏಕೆ ಒಂದೇ ಹೆಸರನ್ನು ಹೊಂದಿಲ್ಲ..? ಇವರೆಡೂ ಬೇರೆ ಎನ್ನುವುದಕ್ಕೆ ಯಾವುದೇ ಸಂಶಯ ಬೇಡ. ಮುಸ್ಲಿಂ ಹಾಗೂ ಸಿಖ್​​ರನ್ನು ಸೋಲಿಸುವುದು ಹಿಂದೂ ಧರ್ಮವೇ..? ಆದರೆ ಹಿಂದುತ್ವ ಅಂದರೆ ಇದೇ ಎಂದು ಹೇಳಿದ್ದಾರೆ.

ರಾಹುಲ್​ ಗಾಂಧಿಯ ಈ ಎಲ್ಲಾ ಆರೋಪಗಳ ವಿರುದ್ಧ ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಲ್ವಿಯಾ – ಸಲ್ಮಾನ್​ ಖುರ್ಷಿದ್​ ಹಾಗೂ ರಾಶಿದ್​ ಅಲ್ವಿ ಹಿಂದೂ ಹಾಗೂ ಹಿಂದುತ್ವವನ್ನು ಅವಮಾನಿಸುವ ಸ್ವತಂತ್ರ ಏಜೆಂಟ್​ ಎಂದು ನೀವು ಭಾವಿಸಿದ್ದೀರಿ. ಇಲ್ಲಿ ರಾಹುಲ್​ ಗಾಂಧಿ ಕೂಡ ಇಂತದ್ದೇ ಕೆಲಸ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್​ ಹಿಂದುತ್ವವನ್ನು ಜೀವನದ ವಿಧಾನ ಎಂದಿದೆ. ಆದರೆ ರಾಹುಲ್​ ಇದನ್ನು ಹಿಂಸಾಚಾರ ಅಂತಿದ್ದಾರೆ ಎಂದು ಕಿಡಿಕಾರಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...