ದುಬೈ: ಟಿ-20 ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಈಗಾಗಲೇ ಹೊರಬಿದ್ದಿದೆ. ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಕಳಪೆ ಫೀಲ್ಡಿಂಗ್ ಗೆ ತಕ್ಕ ಬೆಲೆ ತೆತ್ತಿದೆ. ಸೆಮೀಸ್ ನಲ್ಲಿ ಕಾಂಗರೂ ಬ್ಯಾಟ್ಸ್ ಮನ್ ಮ್ಯಾಥ್ಯೂ ವೇಡ್ನ ಕ್ಯಾಚ್ ಇನ್ನು ಹಸನ್ ಅಲಿ ಕೈಬಿಟ್ಟ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಗುರುವಾರದಂದು ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯದ 19ನೇ ಓವರ್ ನಲ್ಲಿ ವೇಗಿ ಶಾಹೀನ್ ಶಾ ಅಫ್ರಿದಿ ಅವರ ಬೌಲಿಂಗ್ ಗೆ ವೇಗವಾಗಿ ಹೊಡೆಯಲು ಹೋದ ಮ್ಯಾಥ್ಯೂ ವೇಡ್, ಇನ್ನೇನು ಔಟ್ ಆಗಬಹುದಿತ್ತು. ಆದರೆ, ಫೀಲ್ಡಿಂಗ್ ನಲ್ಲಿದ್ದ ಪಾಕ್ ನ ಹಸನ್ ಅಲಿ ಸುಲಭದ ಕ್ಯಾಚ್ ಅನ್ನು ಹಿಡಿಯುವಲ್ಲಿ ಸೋತಿದ್ದಾರೆ. ಹೀಗಾಗಿ, ಶಾಹೀನ್ ಶಾ ಆಫ್ರಿದಿ ಅವರ ಬೌಲಿಂಗ್ನಲ್ಲಿ ಮ್ಯಾಥ್ಯೂ ವೇಡ್ ಸತತ ಮೂರು ಸಿಕ್ಸರ್ ಗಳನ್ನು ಬಾರಿಸಿದ್ದಾರೆ.
ಹಸನ್ ಅಲಿ ಕ್ಯಾಚ್ ಕೈ ಬಿಟ್ಟಿದ್ದು ಪಾಕ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ಹಸನ್ ಅಲಿ ತಮ್ಮ ನಾಲ್ಕು ಓವರ್ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯದೆ 44 ರನ್ಗಳನ್ನು ನೀಡಿದ್ದಾರೆ.
ಪಾಕಿಸ್ತಾನ ತಂಡದ ಕಳಪೆ ಫೀಲ್ಡಿಂಗ್ ಆಸ್ಟ್ರೇಲಿಯಾಗೆ ವರವಾಗಿ ಪರಿಣಮಿಸಿದ್ದು, ಕಾಂಗರೂ ಪಡೆ ಫೈನಲ್ ಗೆ ಲಗ್ಗೆ ಇಟ್ಟಿದೆ. ಇನ್ನು ಹಸನ್ ಅಲಿಯ ಕ್ಯಾಚ್ ಡ್ರಾಪ್ ಇಂಟರ್ನೆಟ್ ನಲ್ಲಿ ಮೀಮ್ಸ್ ಗಳನ್ನು ಸೃಷ್ಟಿಸಿದೆ. ಇದು ನಿಜವಾದ ಪಾಕ್ ಕ್ರಿಕೆಟಿಗರ ನಿಜವಾದ ಫೀಲ್ಡಿಂಗ್ ಎಂದೆಲ್ಲಾ ಭಾರತೀಯರು ತಮಾಷೆ ಪ್ರತಿಕ್ರಿಯೆಗಳ್ನು ನೀಡಿದ್ದಾರೆ.