ಮಾರುತಿ ಸುಜುಕಿ ಸಿಯಾಜ್, ಹುಂಡೈ ವೆರ್ನಾ, ಹೊಂಡಾ ಸಿಟಿ ನಂತರ ಮಧ್ಯಮ ಗಾತ್ರದ ಸೆಡಾನ್ ಮಾದರಿಯ ಕಾರೊಂದು ಭಾರತದ ಮಾರುಕಟ್ಟೆಗೆ ಹಲವು ವರ್ಷಗಳಿಂದ ಪರಿಚಯಿಸಲಾಗಿಲ್ಲ.
ಕೊರೊನಾ ಹಾವಳಿ ನಂತರವಂತೂ ಆಟೋಮೊಬೈಲ್ ಕ್ಷೇತ್ರವು ಚೇತರಿಕೆ ಕಾಣುತ್ತಿದ್ದರೂ ಹೊಸ ಮಾಡೆಲ್ ಕಾರುಗಳ ಬಿಡುಗಡೆಗೆ ಇನ್ನೂ ಕಷ್ಟಪಡುವುದು ನಿಂತಿಲ್ಲ. ಇಂಥ ವೇಳೆಯಲ್ಲಿ ಭಾರತೀಯ ಕಾರು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿರುವುದು ಸ್ಕೋಡಾ ’ಸ್ಲೇವಿಯಾ’.
ಈ ಕಾರು ಭಾರತದಲ್ಲೇ ತಯಾರಾಗಿದೆ. ಇದರ ಚಾಲಕ ಕೂರುವ ಮುಂಭಾಗದ ಕ್ಯಾಬಿನ್ ಫೋಟೊವೊಂದು ಕಂಪನಿಯಿಂದ ಬಿಡುಗಡೆಯಾಗಿದ್ದು, ಕಾರು ಪ್ರಿಯರ ಹುಬ್ಬೇರುವಂತೆ ಮಾಡಿದೆ.
1.0 ಲೀಟರ್ ಟಿಎಸ್‌ಐ ಎಂಜಿನ್ ಹೊಂದಿರುವ ಈ ಸೆಡಾನ್ ಮಾದರಿ ಕಾರು, ಆಟೋಮ್ಯಾಟಿಕ್ ಮತ್ತು ಮ್ಯಾನುಯೆಲ್ ಗೇರ್ ಬಾಕ್ಸ್ ಶ್ರೇಣಿಗಳಲ್ಲಿ ಲಭ್ಯವಿದೆ. 2022ರ ಆರಂಭದಲ್ಲೇ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗಲಿರುವ ಈ ಕಾರು ಅಂದಾಜು ಆರಂಭಿಕ ಬೆಲೆ 8 ಲಕ್ಷ ರೂ. ಎಂದು ಕಂಪನಿಯ ಮೂಲಗಳು ತಿಳಿಸಿವೆ. ಇದೇ ಕಾರಿನ ಟಾಪ್ ಶ್ರೇಣಿಯು 13 ಲಕ್ಷ ರೂ.ವರೆಗೆ ಸಿಗಲಿದೆ ಎನ್ನಲಾಗುತ್ತಿದೆ.
ಗಾಯಕಿ ಹಾಡುತ್ತಿದ್ದಾಗಲೇ ನಡೆಯಿತು ಆ ಘಟನೆ….! ಹೃದಯಸ್ಪರ್ಶಿ ವಿಡಿಯೋ ಜಾಲತಾಣದಲ್ಲಿ ವೈರಲ್
ಸದ್ಯಕ್ಕೆ ಸ್ಕೋಡಾದ ಆಕ್ಟೇವಿಯಾ, ರ‍್ಯಾಪಿಡ್ ಮಾಡೆಲ್‌ಗಳ ಜತೆಗೆ ಮಾರುಕಟ್ಟೆಯಲ್ಲಿ ಎಸ್‌ಯುವಿ ಮಾದರಿಯಲ್ಲಿ ‘ಕುಶಾಕ್ ‘ ಲಗ್ಗೆಯಿಟ್ಟಿದೆ. ಮರು ವಿನ್ಯಾಸಗೊಂಡಿರುವ ಕುಶಾಕ್, ದಿನೇದಿನೆ ಜನಪ್ರಿಯಗೊಳ್ಳುತ್ತಿದೆ ಕೂಡ. ಅಂದಹಾಗೇ, ನ.18ರಂದು ಜಾಗತಿಕ ವೇದಿಕೆಯಲ್ಲಿ ಸ್ಕೋಡಾ ಕಂಪನಿ ’ಸ್ಲೇವಿಯಾ’ದ ಮೊದಲ ಮಾಡೆಲ್ ಅನ್ನು ಪ್ರದರ್ಶಿಸಲಿದೆ. ಆವತ್ತಿಗೆ ಸ್ಲೇವಿಯಾದ ಪೂರ್ಣ ಮೈಮಾಟ ಕಾರು ಚಾಲನಾ ಪ್ರಿಯರನ್ನು ಆಕರ್ಷಿಸುವುದರಲ್ಲಿ ಸಂಶಯವೇ ಇಲ್ಲ ಎನ್ನುವ ಭರವಸೆ ಕಂಪನಿಯದ್ದಾಗಿದೆ.