alex Certify ಪ್ರಾದೇಶಿಕ ಭದ್ರತೆ ಸಭೆಯಲ್ಲಿ ಪಾಕ್​ ಗೈರಾದ ಹಿಂದಿನ ಕಾರಣ ಬಿಚ್ಚಿಟ್ಟ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾದೇಶಿಕ ಭದ್ರತೆ ಸಭೆಯಲ್ಲಿ ಪಾಕ್​ ಗೈರಾದ ಹಿಂದಿನ ಕಾರಣ ಬಿಚ್ಚಿಟ್ಟ ಭಾರತ

ಅಫ್ಘಾನಿಸ್ತಾನ ಸರ್ಕಾರವನ್ನು ಪತನಗೊಳಿಸಿ ತಾಲಿಬಾನ್​​ ಅಪ್ಘನ್​​ ವಶಪಡಿಸಿಕೊಂಡ ಬಳಿಕ ಭಾರತವು ನಿನ್ನೆಯಷ್ಟೇ ಪ್ರಾದೇಶಿಕ ಶೃಂಗಸಭೆಯನ್ನು ನಡೆಸಿ ಅಪ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಭಾಗಿಯಾದ ಎಲ್ಲಾ ರಾಷ್ಟ್ರಗಳು ಉಗ್ರರಿಗೆ ತರಬೇತಿ ಹಾಗೂ ಆಶ್ರಯ ನೀಡುವ ಜಾಗ ಅಫ್ಘಾನಿಸ್ತಾನವಾಗದಂತೆ ನೋಡಿಕೊಳ್ಳಬೇಕು ಎಂದು ಒಕ್ಕೊರಲ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರಾದೇಶಿಕ ಸಭೆಯನ್ನುದ್ದೇಶಿಸಿ ಇಂದು ದೆಹಲಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​​ ಬಾಗ್ಚಿ, ಪಾಕಿಸ್ತಾನಕ್ಕೆ ಸಭೆಗೆ ಆಹ್ವಾನ ನೀಡಿದ್ದೆವು. ಆದರೆ ಅವರು ಸಭೆಗೆ ಹಾಜರಾಗಿಲ್ಲ. ಇದು ಅಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನದ ಒಣಪ್ರತಿಷ್ಠೆಯನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.

ಹ್ಯಾಂಗೋವರ್ ತಡೆಗಟ್ಟುತ್ತಾ ಈ ಉಂಗುರ…? ಕುತೂಹಲ ಕೆರಳಿಸಿದೆ ಉತ್ಖನನದ ವೇಳೆ ಪತ್ತೆಯಾದ ರಿಂಗ್

ಅಪ್ಘಾನಿಸ್ತಾನದ ಜನತೆಗೆ ಭಾರತ ಬೆಂಬಲ ನೀಡುವ ಬಗ್ಗೆ ಯಾವುದೇ ಗೊಂದಲವಿಲ್ಲ. ಅಪ್ಘಾನಿಸ್ತಾನದ ಜನತೆಗೆ ಕಳೆದ ಅನೇಕ ವರ್ಷಗಳಿಂದ ಭಾರತ ಬೆಂಬಲ ನೀಡುತ್ತಲೇ ಬಂದಿದೆ. ಆದರೆ ಕಳೆದ ಕೆಲ ತಿಂಗಳಿನಿಂದ ಅಪ್ಘಾನಿಸ್ತಾನ ನೆಲದ ಸ್ಥಿತಿ ತುಂಬಾನೇ ಕಠಿಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆದರೆ ಅಫ್ಘಾನಿಸ್ತಾನದ ಈ ಸಂಕಷ್ಟವನ್ನು ಹೇಗೆ ಪರಿಹರಿಸಬೇಕು ಎಂಬ ವಿಷಯದ ಬಗ್ಗೆ ನಾವು ಸಭೆ ನಡೆಸುತ್ತಿದ್ದೇವೆ. ಪ್ರಾದೇಶಿಕ ಶೃಂಗಸಭೆಯಲ್ಲಿ ಅಪ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...