ಸಾಮಾಜಿಕ ಜಾಲತಾಣದಲ್ಲಿ ವಿಶೇಷ, ಸಾಹಸ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ, ಲೆಬನಾನ್‌ನ ಬಾಣಸಿಗರೊಬ್ಬರು 10,000 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕದ ಖಾದ್ಯ ತಯಾರಿಸಿದ್ದಾರೆ. ವಿಶ್ವ ಹಮ್ಮಸ್ ದಿನದಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ (GWR) ಈ ಅದ್ಭುತ ಸಾಧನೆಯನ್ನು ಗುರುತಿಸಿದೆ.
ಹೌದು, ಟರ್ಕಿಶ್ ಬಾಣಸಿಗ ಊಹಿಸಲಾಗದ ಸಾಧನೆಯನ್ನು ಮಾಡಿದ್ದಾರೆ. ಪ್ರಸಿದ್ಧ ಬಾಣಸಿಗ ಬುರಾಕ್ ಓಜ್ಡೆಮಿರ್ ಎಂಬುವವರು ಮರುಭೂಮಿಯಲ್ಲಿ ಒಂದು ದೊಡ್ಡ ಬಾಣಲೆಯಲ್ಲಿ ಫ್ರೈಮ್ಗಳನ್ನು ಬೇಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಅತ್ಯಾಕರ್ಷಕ ವಿಡಿಯೋ ವೈರಲ್ ಆಗಿದೆ.
@cznburak ಎಂಬ ಇನ್ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬಾಣಸಿಗ ಬುರಾಕ್ ಅವರ ಅಸಾಮಾನ್ಯ ಸಾಧನೆಯ ವಿಡಿಯೋವನ್ನು 98 ಮಿಲಿಯನ್ ಜನ ವೀಕ್ಷಿಸಿದ್ದಾರೆ.
ಟರ್ಕಿಶ್ ಬಾಣಸಿಗ ದುಬೈ ಮರುಭೂಮಿಯ ಮಧ್ಯದಲ್ಲಿ ದೊಡ್ಡ ಬಾಣಲೆಯನ್ನು ಇಡುವುದಕ್ಕೂ ಮೊದಲು ಮರದ ತುಂಡುಗಳನ್ನಿಟ್ಟು ಬೆಂಕಿ ಹಚ್ಚಿದ್ದಾರೆ. ಬಳಿಕ ಅತಿ ದೊಡ್ಡದಾದ ಬಾಣಲೆಯನ್ನಿಟ್ಟು ಅದಕ್ಕೆ ಎಣ್ಣೆ ಸುರಿದಿದ್ದಾರೆ. ನಂತರ 10,000 ಕೆ.ಜಿ ತೂಕದ ಫ್ರೈಮ್ ಗಳನ್ನು ಎಣ್ಣೆಯಲ್ಲಿ ಕರಿದಿದ್ದಾರೆ. ಕ್ಷಣಾರ್ಧದಲ್ಲಿ ಫ್ರೈಮ್ ಗಳು ಕೂಡ ಸವಿಯಲು ಸಿದ್ಧವಾಯ್ತು.
ಇತ್ತೀಚೆಗೆ, ಬಾಣಸಿಗ ಬುರಾಕ್ ದುಬೈನ ಬಹುಮಹಡಿ ಬುರ್ಜ್ ಖಲೀಫಾವನ್ನು ಬಟರ್‌ನಟ್ ಸ್ಕ್ವ್ಯಾಷ್‌ನಿಂದ ಮರುಸೃಷ್ಟಿಸಿದ್ದರು ಮತ್ತು ಅದರ ಮೇಲೆ ರುಚಿಕರವಾದ ಮೆರುಗು ನೀಡಿದ್ದರು. ಈ ವಿಡಿಯೋವನ್ನು ಕೂಡ ತನ್ನ ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ.
ಟರ್ಕಿಶ್ ಬಾಣಸಿಗ ಬುರಾಕ್ ಒಜ್ಡೆಮಿರ್ ರೆಸ್ಟೋರೆಂಟ್‌ಗಳನ್ನು ಸಹ ಹೊಂದಿದ್ದಾರೆ. ಅವರನ್ನು ಸ್ಮೈಲಿಂಗ್ ಚೆಫ್ ಅಥವಾ CZN ಬುರಾಕ್ ಎಂದೂ ಕೂಡ ಕರೆಯಲಾಗುತ್ತದೆ.
https://www.youtube.com/watch?v=VctSDCN_EiY