alex Certify ಮ್ಯಾರಥಾನ್​ನಲ್ಲಿ ಮನುಷ್ಯರ ಜೊತೆ ಶೂ ಕಟ್ಟಿ ಓಡಿದ ಬಾತುಕೋಳಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮ್ಯಾರಥಾನ್​ನಲ್ಲಿ ಮನುಷ್ಯರ ಜೊತೆ ಶೂ ಕಟ್ಟಿ ಓಡಿದ ಬಾತುಕೋಳಿ..!

ಈ ದಿನಗಳಲ್ಲಿ ನೀವು ಮನೆಯಿಂದ ಹೊರಗೆ ಬೀಳೋದಿಕ್ಕೂ ಆಲಸ್ಯ ಮಾಡುತ್ತಿದ್ದೀರೇ..? ಹಾಗಾದರೆ ನೀವು ಈ ವಿಡಿಯೋ ನೋಡಿದ ಬಳಿಕವಂತೂ ಕಾಲಿಗೆ ಶೂ ಕಟ್ಟಲೇಬೇಕು. ಚಳಿಗಾಲದಲ್ಲಿ ಬೆಳಗ್ಗೆ ಎದ್ದು ಜಾಗಿಂಗ್​ ಮಾಡೋಕೆ ಸಾಧ್ಯವಿಲ್ಲ ಅಂತಿದ್ದೀರಾ..! ಹಾಗಾದರೆ ನಿಮಗೆ ಸ್ಪೂರ್ತಿ ನೀಡುವ ವಿಡಿಯೋ ಇಲ್ಲಿದೆ ನೋಡಿ.

ನ್ಯೂಯಾರ್ಕ್​ನಲ್ಲಿ ನಡೆದ ಮ್ಯಾರಥಾನ್​ನಲ್ಲಿ ವಿಶೇಷ ಸದಸ್ಯನೊಂದು ಕಾಲಿಗೆ ಶೂ ಕಟ್ಟಿ ಓಡಿದೆ. ಹೌದು..! ಈ ಮ್ಯಾರಥಾನ್​ನಲ್ಲಿ ಕೇವಲ ಮನುಷ್ಯರು ಮಾತ್ರವಲ್ಲದೇ ಬಾತುಕೋಳಿ ಕೂಡ ಕಾಲಿಗೆ ಶೂ ಕಟ್ಟಿ ಓಡಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಾತುಕೋಳಿ ಕೂಡ ಮ್ಯಾರಥಾನ್​ ನೆಪದಲ್ಲಿ ನ್ಯೂಯಾರ್ಕ್​ ನಗರ ಸುತ್ತುತ್ತಿರೋದನ್ನು ಕಾಣಬಹುದಾಗಿದೆ. ಬಾತುಕೋಳಿಯ ಈ ಸಾಹಸಕ್ಕೆ ಉಳಿದವರೂ ಕೂಡ ಬೆಂಬಲ ನೀಡ್ತಿರೋದನ್ನು ಕಾಣಬಹುದಾಗಿದೆ. ಬಾತುಕೋಳಿಯ ಕಾಲಿಗೆ ಕಟ್ಟಿದ ಕೆಂಪು ಬಣ್ಣದ ಶೂ ಅಂತೂ ಆಕರ್ಷಣೆಯ ಕೇಂದ್ರಬಿಂದು ಅಂದರೆ ತಪ್ಪಾಗಲಿಕ್ಕಿಲ್ಲ ಅಲ್ವಾ..?

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...