alex Certify ಫಿಶ್​ ಟ್ಯಾಂಕ್​ ಮೇಲೆ ನಿರ್ಮಾಣಗೊಂಡಿದೆ ಈ ವಿಚಿತ್ರ ರೆಸ್ಟೋರೆಂಟ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಶ್​ ಟ್ಯಾಂಕ್​ ಮೇಲೆ ನಿರ್ಮಾಣಗೊಂಡಿದೆ ಈ ವಿಚಿತ್ರ ರೆಸ್ಟೋರೆಂಟ್..​..!

ರೆಸ್ಟೋರೆಂಟ್ ಅಂದರೆ ಹೇಗಿರಬೇಕು..? ಊಟ ಮಾಡೋಕೆ ಸರಿಯಾದ ಜಾಗ, ಉತ್ತಮ ಆಸನ ವ್ಯವಸ್ಥೆ, ಮೇಜು ಇವೆಲ್ಲವೂ ಬೇಕು. ಆದರೆ ಎಂದಾದರೂ ಫಿಶ್​ ಟ್ಯಾಂಕ್​ನಲ್ಲಿ ಕಾಲಿಟ್ಟು ಊಟ ಮಾಡುವ ಸಾಹಸ ಮಾಡಿದ್ದೀರೇ..? ಇಲ್ಲ ಎಂದಾದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ 15 ಸೆಕೆಂಡ್​ಗಳ ವಿಡಿಯೋವನ್ನು ನೀವು ನೋಡಲೇಬೇಕು.

ಕೋಯ್​ ಪಾಂಡ್​ ಕೆಫೆಯಲ್ಲಿ ಕುರ್ಚಿ ಹಾಗೂ ಮೇಜುಗಳನ್ನು ಫಿಶ್​ ಟ್ಯಾಂಕ್​ನಲ್ಲಿ ಇಡಲಾಗಿದೆ. ಫಿಶ್​ ಟ್ಯಾಂಕ್​ನಲ್ಲಿ ಕಾಲನ್ನು ಇಳಿಸಿಕೊಂಡು ಗ್ರಾಹಕರು ಇಲ್ಲಿನ ಖಾದ್ಯಗಳನ್ನು ಸವಿಯಬಹುದಾಗಿದೆ. ರೆಡಿಟ್​ನಲ್ಲಿ 18 ಸೆಕೆಂಡ್​ಗಳ ವಿಡಿಯೋ ಶೇರ್​ ಮಾಡಲಾಗಿದ್ದು ಇದರಲ್ಲಿ ಸಣ್ಣ ಕೋಣೆಯೊಂದನ್ನು ಫಿಶ್​ ಟ್ಯಾಂಕ್​ನಂತೆ ಸಿದ್ಧಪಡಿಸಲಾಗಿದೆ. ಇದರಲ್ಲಿ ಕುರ್ಚಿ ಮೇಜುಗಳನ್ನು ಇಟ್ಟಿರೋದನ್ನು ಕಾಣಬಹುದಾಗಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದ ಇತರೆ ವೇದಿಕೆಗಳಲ್ಲೂ ವೈರಲ್​ ಆಗುತ್ತಿದೆ. ಫಿಶ್​ ಟ್ಯಾಂಕ್​ ರೆಸ್ಟಾರೆಂಟ್​ ವಿಡಿಯೋ ನೋಡಿದ ನೆಟ್ಟಿಗರು ಇಲ್ಲಿ ಊಟ ಮಾಡೋದಾದರೂ ಹೇಗೆ ಎಂದು ಮೂಗು ಮುರಿಯುತ್ತಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...