ಬಾಲಿವುಡ್ನ ಹಾಟ್ ನಟಿ ಮಲ್ಲಿಕಾ ಶೆರವಾತ್ ತಮ್ಮ ಮೈಮಾಟ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಂತವರು. ಒಂದು ಕಾಲದಲ್ಲಿ ಬಾಲಿವುಡ್ನ ಎಲ್ಲಾ ಹಾಟ್ ಹಾಡುಗಳಲ್ಲಿ ಕಾಣಿಸಿಕೊಳ್ತಿದ್ದ ನಟಿ ಸದ್ಯ ವೆಬ್ ಶೋ ಒಂದಕ್ಕೆ ಕಾಲಿಟ್ಟಿದ್ದಾರೆ.
ನಾಗಮತಿ ಎಂಬ ಹೆಸರಿನ ಹಾರರ್ ಸಿನಿಮಾದ ಶೂಟಿಂಗ್ಗೂ ಸಜ್ಜಾಗುತ್ತಿರುವ ಮಲ್ಲಿಕಾ ಶೂಟಿಂಗ್ ವೇಳೆ ತಮ್ಮ ಹಾಗೂ ನಿರ್ಮಾಪಕರೊಬ್ಬರ ಜೊತೆ ನಡೆದ ಸಂಭಾಷಣೆಯೊಂದನ್ನು ಲವ್ ಲಾಫ್ ಲಿವ್ ಶೋನಲ್ಲಿ ಹಂಚಿಕೊಂಡಿದ್ದಾರೆ.
ನಿರ್ಮಾಪಕರೊಬ್ಬರು ಹಾಡೊಂದರ ಶೂಟಿಂಗ್ಗೆ ನಿಮ್ಮ ಸೊಂಟದ ಮೇಲೆ ಚಪಾತಿ ಬೇಯುವಂತೆ ಚಿತ್ರೀಕರಿಸೋಣ. ಇದರಿಂದ ನೀವು ಎಷ್ಟು ಹಾಟ್ ಅನ್ನೋದನ್ನ ತೋರಿಸಿದಂತಾಗುತ್ತದೆ ಎಂದು ಹೇಳಿದ್ದರಂತೆ..! ಆದರೆ ಇದು ತಮಾಷೆ ರೀತಿ ಕಾಣಬಹುದು ಎಂದು ಮಲ್ಲಿಕಾ ಇದನ್ನು ನಿರಾಕರಿಸಿದ್ದರಂತೆ.
ಇಲ್ಲಿ ನಡೆಯುತ್ತೆ ವಿಚಿತ್ರ ಆಚರಣೆ: ಸಗಣಿ ಉಂಡೆಯಲ್ಲಿ ಹೊಡೆದಾಡಿಕೊಳ್ತಾರೆ ಜನ….!
ಹಾಡೊಂದರ ಶೂಟಿಂಗ್ ವಿಚಾರವಾಗಿ ನನ್ನೊಡನೆ ಮಾತನಾಡಲು ಬಂದಿದ್ದ ನಿರ್ಮಾಪಕರೊಬ್ಬರು, ಇದೊಂದು ಹಾಟ್ ಸಾಂಗ್ ಆಗಿದೆ. ಪ್ರೇಕ್ಷಕರಿಗೆ ನೀವು ಹಾಟ್ ಇದ್ದೀರಾ ಎಂದು ತಿಳಿಸೋದು ಹೇಗೆ..? ನೀವು ಎಷ್ಟು ಹಾಟ್ ಅಂದರೆ ನಿಮ್ಮ ಸೊಂಟದಲ್ಲಿ ಚಪಾತಿ ಬೇಯಿಸಬಹುದು. ಎಂದು ನನ್ನ ಬಳಿ ಹೇಳಿದ್ದರು ಅಂತಾ ಮಲ್ಲಿಕಾ ಹೇಳಿದ್ರು. ಆದರೆ ಇದಕ್ಕೆ ನಿರಾಕರಿಸಿದ ಮಲ್ಲಿಕಾ ನಾನು ಈ ರೀತಿಯ ದೃಶ್ಯಗಳನ್ನು ಶೂಟ್ ಮಾಡೋದಿಲ್ಲ ಎಂದು ಹೇಳಿದ್ದರಂತೆ.
ಭಾರತದಲ್ಲಿ ಹಾಟ್ ಎಂಬ ಪದಕ್ಕೆ ಬೇರೆಯದ್ದೇ ಅರ್ಥ ನೀಡಲಾಗಿದೆ. ಹಾಟ್ ಹುಡುಗಿ ಅಂದ ಮಾತ್ರಕ್ಕೆ ಆಕೆಯನ್ನು ವಿಚಿತ್ರವಾಗಿ ನೋಡಲಾಗುತ್ತೆ. ಅದು ಯಾಕೆ ಹಾಗೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈಗ ಈ ದೃಷ್ಟಿಕೋನ ಕೊಂಚ ಮಟ್ಟಿಗೆ ಬದಲಾಗಿದೆ. ಆದರೆ ನಾನು ವೃತ್ತಿ ಜೀವನ ಆರಂಭಿಸಿದ್ದಾಗ ಇದು ವಿಚಿತ್ರವಾಗಿತ್ತು ಎಂದು ಹೇಳಿದ್ರು.