ಸರ್ಕಾರಿ ಭದ್ರತೆಗಳಲ್ಲಿ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಿಸಲು ಆರ್.ಬಿ.ಐ. ಮಹತ್ವದ ಹೆಜ್ಜೆಯಿಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ, ನವೆಂಬರ್ 12 ರಂದು ಆರ್.ಬಿ.ಐ. ರಿಟೇಲ್ ಡೈರೆಕ್ಟ್ ಸ್ಕೀಮ್ ಪ್ರಾರಂಭಿಸಲಿದ್ದಾರೆ.
ಆರ್.ಬಿ.ಐ. ರಿಟೇಲ್ ಡೈರೆಕ್ಟ್ ಸ್ಕೀಮ್ ನಲ್ಲಿ ಚಿಲ್ಲರೆ ಹೂಡಿಕೆದಾರರು ತಮ್ಮ ಸರ್ಕಾರಿ ಸೆಕ್ಯುರಿಟೀಸ್ ಖಾತೆಯನ್ನು ಯಾವುದೇ ಶುಲ್ಕವಿಲ್ಲದೆ ತೆರೆಯಬಹುದು. ಇದು ಸುರಕ್ಷಿತ ಹೂಡಿಕೆಯಾಗಲಿದೆ.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಆರ್.ಬಿ.ಐ. ರಿಟೇಲ್ ಡೈರೆಕ್ಟ್ ಸ್ಕೀಮ್ ಘೋಷಿಸಿದೆ. ಇದರ ಅಡಿಯಲ್ಲಿ, ಚಿಲ್ಲರೆ ಹೂಡಿಕೆದಾರರು, ಸರ್ಕಾರಿ ಭದ್ರತಾ ಮಾರುಕಟ್ಟೆಯಲ್ಲಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಬಹುದು, ಈ ಹೂಡಿಕೆಯನ್ನು ಪ್ರೈಮರಿ ಮತ್ತು ಸೆಕೆಂಡರಿ ಮಾರುಕಟ್ಟೆಯಲ್ಲಿ ಮಾಡಬಹುದು.
ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತೆ ಈ ಸುಲಭ ಟಿಪ್ಸ್
ಆರ್.ಬಿ.ಐ. ಗವರ್ನರ್ ಶಕ್ತಿಕಾಂತ ದಾಸ್ ಫೆಬ್ರವರಿಯಲ್ಲಿ ನೀತಿ ಪರಾಮರ್ಶೆಯ ಸಮಯದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಇದನ್ನು ರಚನಾತ್ಮಕ ಸುಧಾರಣೆ ಎಂದು ಅವರು ಕರೆದಿದ್ದರು. ಈ ವ್ಯಾಪಾರ ವೇದಿಕೆಯ ಮೂಲಕ, ಚಿಲ್ಲರೆ ಹೂಡಿಕೆದಾರರು ಪ್ರಾಥಮಿಕ ಹರಾಜಿನಲ್ಲಿ ಭಾಗವಹಿಸಬಹುದು. ಹಾಗೂ ಎನ್ ಡಿ ಎಸ್-ಒಎಂನಲ್ಲಿ ಹೂಡಿಕೆ ಮಾಡಬಹುದು ಎಂದು ಆರ್.ಬಿ.ಐ. ಜುಲೈನಲ್ಲಿ ಹೇಳಿತ್ತು. ಈ ಯೋಜನೆಯ ಅಡಿಯಲ್ಲಿ ಒದಗಿಸಲಾದ ಆನ್‌ಲೈನ್ ಪೋರ್ಟಲ್ ಮೂಲಕ ಈ ಖಾತೆಯನ್ನು ತೆರೆಯಬಹುದು.