ಕೋವಿಡ್ 19 ಲಸಿಕೆ ಪಡೆದ ಆರು ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯುವುದು ಸೂಕ್ತ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ಹೇಳಿದ್ದಾರೆ.
ಇದೇ ವೇಳೆ ನಾಸಲ್ ಲಸಿಕೆಯ ಮಹತ್ವದ ಬಗ್ಗೆಯೂ ಮಾಹಿತಿ ನೀಡಿದರು. ಅಲ್ಲದೇ ಝಿಕಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಕಂಪನಿ ಭಾರತ್ ಬಯೋಟೆಕ್ ಎಂದು ಹೇಳಿದ್ರು.
ಪ್ರಧಾನಿ ಮೋದಿಯೇ ಕೋವ್ಯಾಕ್ಸಿನ್ ಲಸಿಕೆಯನ್ನು ಸ್ವೀಕರಿಸುವ ಮೂಲಕ ಭಾರತೀಯ ವಿಜ್ಞಾನಿಗಳ ಮೇಲೆ ನಂಬಿಕೆಯನ್ನು ತೋರಿಸಿದ್ರು. ಎರಡನೆ ಡೋಸ್ ಪಡೆದ ಬಳಿಕ ಬೂಸ್ಟರ್ ಡೋಸ್ ಪಡೆಯಲು ಆರು ತಿಂಗಳ ಅಂತರ ಸೂಕ್ತ ಎಂದು ಕೃಷ್ಣ ಹೇಳಿದರು.
ಅಮೆರಿಕ ಹಾಗೂ ನ್ಯೂಜಿಲೆಂಡ್ನಲ್ಲಿ ಆರಂಭವಾಯ್ತು ‘ಟ್ವಿಟರ್ ಬ್ಲೂ’ ಸೇವೆ…..! ಏನಿದರ ವಿಶೇಷತೆ….? ಇಲ್ಲಿದೆ ಮಾಹಿತಿ
ಭಾರತ್ ಬಯೋಟೆಕ್ ಬೂಸ್ಟರ್ ಡೋಸ್ ಆಗಿ ನಾಸಲ್ ಲಸಿಕೆಯನ್ನು ತರಲು ನೋಡುತ್ತಿದೆ. ಇಡೀ ವಿಶ್ವವೇ ನಾಸಲ್ ಲಸಿಕೆಯತ್ತ ಮುಖ ಮಾಡಿದೆ. ಇದರಿಂದ ಮಾತ್ರ ರೋಗ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ನಾಸಲ್ ಲಸಿಕೆಗಳು ಸೋಂಕು ಹೊಂದಿರುವವರ ದೇಹದಲ್ಲಿ ಹಾಗೂ ಒಂದು ಡೋಸ್ ಲಸಿಕೆ ಪಡೆದವರಲ್ಲಿ ಸಮನಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದ್ರು.
ಪ್ರಧಾನಿ ಮೋದಿ ಕೋವ್ಯಾಕ್ಸಿನ್ ಲಸಿಕೆ ಪಡೆದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಇದಕ್ಕಿಂತ ಹೆಚ್ಚಿನದು ವಿಜ್ಞಾನಿಗಳಿಗೆ ಇನ್ನೇನು ಬೇಕು..? ದೇಶದ ನಾಯಕನೇ ನಮ್ಮ ಲಸಿಕೆ ಸ್ವೀಕರಿಸಿದ್ದಾರೆ. ಇದಕ್ಕಿಂತ ದೊಡ್ಡ ತೃಪ್ತಿ ವಿಜ್ಞಾನಿಗೆ ಬೇರೆ ಇನ್ಯಾವುದು ಇರಲಿಕ್ಕಿಲ್ಲ. ಇದು ಭಾರತದ ವಿಜ್ಞಾನದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದ್ರು.
ಝಿಕಾ ಲಸಿಕೆಯ ವಿಚಾರವಾಗಿಯೂ ಮಾತನಾಡಿದ ಕೃಷ್ಣ, ಝಿಕಾ ವೈರಸ್ಗೆ ಭಾರತ್ ಬಯೋಟೆಕ್ ಲಸಿಕೆ ತಯಾರಿಸಿದೆ. ಇದರ ಮೊದಲನೇ ಹಂತದ ಪ್ರಾಯೋಗಿಕ ಪರೀಕ್ಷೆ ಪ್ರಗತಿಯಲ್ಲಿದೆ ಎಂದು ಹೇಳಿದರು.