ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯೆ 10ನೇ ಕಂತು ಯಾವಾಗ ಬರುತ್ತೆ ಎಂಬ ಪ್ರಶ್ನೆ ಅನೇಕರಲ್ಲಿ. ಯೋಜನೆಯ 10 ನೇ ಕಂತು ಡಿಸೆಂಬರ್ 15 ರಂದು ಬರಲಿದೆ ಎಂಬ ಸುದ್ದಿಯಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ಪ್ರತಿ ವರ್ಷ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿ ನಗದು ಹಣವನ್ನು ನೀಡಲಾಗುತ್ತದೆ. ಮೊದಲ ಕಂತು ಏಪ್ರಿಲ್-ಜುಲೈನಲ್ಲಿ ಬರಲಿದೆ. ಎರಡನೇ ಕಂತು ಆಗಸ್ಟ್ ನವೆಂಬರ್ ನಲ್ಲಿ ಸಿಗುತ್ತದೆ. ಮೂರನೇ ಕಂತು ಡಿಸೆಂಬರ್-ಮಾರ್ಚ್ ನಡುವೆ ಸಿಗುತ್ತದೆ. ಈ ಬಾರಿ ಡಿಸೆಂಬರ್ 10ರಿಂದ ಮೂರನೇ ಹಂತಿನ ಹಣ, ರೈತರ ಖಾತೆಗೆ ಬರುವ ಸಾಧ್ಯತೆಯಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯುವ ಫಲಾನುಭವಿಗಳು, ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಆಧಾರ್ ಜೊತೆ ಬ್ಯಾಂಕ್ ಖಾತೆ ಲಿಂಕ್ ಮಾಡದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ. ಹಾಗೆ ಬ್ಯಾಂಕ್ ಖಾತೆ ನಂಬರ್ ತಪ್ಪಾಗಿದ್ದರೂ ಹಣ ಸಿಗುವುದಿಲ್ಲ.
BREAKING: ಚಲಿಸುತ್ತಿದ್ದ ಬಸ್ ಗೆ ತಗುಲಿದ ಬೆಂಕಿ; 12 ಮಂದಿ ಪ್ರಯಾಣಿಕರು ಸಜೀವ ದಹನ
ಮೊದಲು, pmkisan.gov.in ವೆಬ್‌ಸೈಟ್‌ಗೆ ಹೋಗಬೇಕು. ಫಾರ್ಮರ್ಸ್ ಕಾರ್ನರ್ ಲಿಂಕ್ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಎಡಿಟ್ ಲಿಂಕ್ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಬ್ಯಾಂಕ್ ಖಾತೆಯ ವಿವರಗಳು ತಪ್ಪಾಗಿದ್ದರೆ ಅದನ್ನು ಸರಿಪಡಿಸಬೇಕು.
ಫೆಬ್ರವರಿ, 2019ರಲ್ಲಿ ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಲಾಯ್ತು. 2 ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಮಾತ್ರ ಈ ಯೋಜನೆ ಲಾಭ ನೀಡಲಾಗ್ತಿತ್ತು. ಜೂನ್ 2019 ರಲ್ಲಿ ಇದನ್ನು ಪರಿಷ್ಕರಿಸಲಾಯಿತು. ಎಲ್ಲಾ ರೈತ ಕುಟುಂಬಗಳಿಗೆ ಇದ್ರ ಲಾಭ ಸಿಗಲಿದೆ. ಆದ್ರೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.