alex Certify ಬರೋಬ್ಬರಿ 1 ವರ್ಷಗಳ ಬಳಿಕ ನಟಿ ರಿಯಾ ಚಕ್ರವರ್ತಿ ಬ್ಯಾಂಕ್​ ಖಾತೆಗಳ ಮೇಲಿದ್ದ ಮುಟ್ಟುಗೋಲು ತೆರವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 1 ವರ್ಷಗಳ ಬಳಿಕ ನಟಿ ರಿಯಾ ಚಕ್ರವರ್ತಿ ಬ್ಯಾಂಕ್​ ಖಾತೆಗಳ ಮೇಲಿದ್ದ ಮುಟ್ಟುಗೋಲು ತೆರವು

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣ ಸಂಬಂಧ ಡ್ರಗ್​ ಸೇವನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರಿಯಾ ಚಕ್ರವರ್ತಿ ಅವರ ಬ್ಯಾಂಕ್​ ಖಾತೆಗಳನ್ನು ಎನ್​​ಸಿಬಿ ಕಳೆದ ವರ್ಷ ಮುಟ್ಟುಗೋಲು​ ಹಾಕಿಕೊಂಡಿತ್ತು.

ಈ ಸಂಬಂಧ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಎಸ್​ಡಿಪಿಎಸ್​ ನ್ಯಾಯಾಲಯ ಅವರ ಬ್ಯಾಂಕ್​​ ಖಾತೆಯನ್ನು ವಾಪಾಸ್​ ನೀಡಿದೆ.

ಅರ್ಜಿದಾರರ ಬ್ಯಾಂಕ್​ ಖಾತೆಯನ್ನು ಮರುಸ್ಥಾಪಿಸಲು ಪ್ರತಿವಾದಿ ಕಡೆಯಿಂದ ಯಾವುದೇ ಬಲವಾದ ಆಕ್ಷೇಪಣೆ ಇಲ್ಲದ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳಿಗೆ ಒಳಪಟ್ಟು ಅರ್ಜಿದಾರರಾದ ರಿಯಾ ಚಕ್ರವರ್ತಿ ತಮ್ಮ ಬ್ಯಾಂಕ್​ ಖಾತೆಗಳು ಹಾಗೂ ಸ್ಥಿರ ಠೇವಣಿಗಳನ್ನು ಬಳಕೆ ಮಾಡಬಹುದು ಎಂದು ಹೇಳಿದೆ. ಇದರ ಜೊತೆಯಲ್ಲಿ ಲ್ಯಾಪ್​ಟಾಪ್​ ಹಾಗೂ ಮೊಬೈಲ್​ ಫೋನ್​ನ್ನು ಮರಳಿ ಪಡೆಯುವ ರಿಯಾ ಚಕ್ರವರ್ತಿಯ ಮತ್ತೊಂದು ಪ್ರತ್ಯೇಕ ಅರ್ಜಿಗೂ ಸಮ್ಮತಿ ನೀಡಿದೆ.

ರಿಯಾ ಚಕ್ರವರ್ತಿಗೆ 1 ಲಕ್ಷ ರೂಪಾಯಿ ಮೌಲ್ಯದ ಪರಿಹಾರದ ಬಾಂಡ್​ ನೀಡುವಂತೆ ಸೂಚನೆ ನೀಡಿದೆ. ಕಳೆದ ವರ್ಷ ಸುಶಾಂತ್​ ಸಿಂಗ್​ ರಜಪೂತ್​ ನಿಧನದ ಬಳಿಕ ರಿಯಾ ಹಾಗೂ ಆಕೆಯ ಸಹೋದರ ಶೋಯಿಕ್​ ಚಕ್ರವರ್ತಿಯನ್ನು ಡ್ರಗ್​ ಸೇವನೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇಬ್ಬರಿಗೂ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...