alex Certify ಅಮೆರಿಕ ಹಾಗೂ ನ್ಯೂಜಿಲೆಂಡ್​ನಲ್ಲಿ ಆರಂಭವಾಯ್ತು ‘ಟ್ವಿಟರ್​ ಬ್ಲೂ’ ಸೇವೆ…..! ಏನಿದರ ವಿಶೇಷತೆ….? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಹಾಗೂ ನ್ಯೂಜಿಲೆಂಡ್​ನಲ್ಲಿ ಆರಂಭವಾಯ್ತು ‘ಟ್ವಿಟರ್​ ಬ್ಲೂ’ ಸೇವೆ…..! ಏನಿದರ ವಿಶೇಷತೆ….? ಇಲ್ಲಿದೆ ಮಾಹಿತಿ

ಟ್ವಿಟರ್​ ಬ್ಲೂ ಇದೀಗ ಅಮೆರಿಕ ಹಾಗೂ ನ್ಯೂಜಿಲೆಂಡ್​ನ ಬಳಕೆದಾರರಿಗೆ ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ. ‌

ʼಟ್ವಿಟರ್​ ಬ್ಲೂʼ ಎಂಬುವುದು ಟ್ವಿಟರ್​ ಮೈಕ್ರೋಬ್ಲಾಗಿಂಗ್​ ವೇದಿಕೆ ನೀಡುತ್ತಿರುವ ಚಂದಾದಾರಿಕೆಯ ಸೇವೆಯಾಗಿದೆ. ಈ ಸೇವೆಯ ಮೂಲಕ ನೀವು ಟ್ವೀಟ್​ಗಳನ್ನು ರದ್ದು ಗೊಳಿಸುವ ಹಾಗೂ ಯಾವುದೇ ಜಾಹಿರಾತುಗಳಿಲ್ಲದೇ ಸುದ್ದಿಗಳನ್ನು ಓದುವ ಸಾಮರ್ಥ್ಯವನ್ನು ಹೊಂದಲಿದ್ದೀರಿ. ಈ ಹೊಸ ವೈಶಿಷ್ಟ್ಯದ ಮೂಲಕ ಟ್ವಿಟರ್​ ಸಂಸ್ಥೆಯು ತನ್ನ ಆದಾಯ ಹೆಚ್ಚಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಟ್ವಿಟರ್​ ಬ್ಲೂ ಚಂದಾದಾರಿಕೆಯು ತಿಂಗಳಿಗೆ 222 ರೂಪಾಯಿಗಳಿಗೆ ಅಮೆರಿಕದಲ್ಲಿ ಲಭ್ಯವಿದೆ. ಈ ಚಂದಾದಾರಿಕೆಯ ಮೂಲಕ ಯಾವುದೇ ಜಾಹಿರಾತುಗಳಿಲ್ಲದೇ ಸುದ್ದಿಯನ್ನು ಓದಬಹುದು, ದೀರ್ಘ ಅವಧಿಯ ವಿಡಿಯೋಗಳನ್ನು ಅಪ್​ಲೋಡ್​ ಮಾಡಬಹುದು ಹಾಗೂ ಟ್ವಿಟರ್​ ಅಪ್ಲಿಕೇಶನ್​​ನಲ್ಲಿ ನೇವಿಗೇಷನ್​ ಬಾರ್​ನ್ನು ಕಸ್ಟಮೈಸ್​ ಮಾಡಬಹುದಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ವೈಶಿಷ್ಟ್ಯದ ಮೂಲಕ ಬಳಕೆದಾರರ ಬಹುಬೇಡಿಕೆಯ ಟ್ವೀಟ್​ ರದ್ದುಗೊಳಿಸುವ ಆಯ್ಕೆಯು ನಿಮ್ಮ ಪಾಲಾಗಲಿದೆ. ಇದರಿಂದಾಗಿ ಬಳಕೆದಾರರು ತಮ್ಮ ಟ್ವೀಟ್​ನ್ನು ಪೋಸ್ಟ್​ ಮಾಡುವ ಮುನ್ನ ಒಂದು ನಿಮಿಷಗಳ ಕಾಲ ಟ್ವೀಟ್​ನ್ನು ಪ್ರೀವೀವ್​ ಮಾಡಲು ಹಾಗೂ ಬದಲಾವಣೆಗಳನ್ನು ಮಾಡಲು ಅವಕಾಶ ಇರಲಿದೆ. ಆದರೆ ಇಲ್ಲಿಯವರೆಗೆ ಟ್ವಿಟರ್​ ಸಂಸ್ಥೆ ಬಹುಬೇಡಿಕೆಯ ಎಡಿಟ್​ ಟ್ವೀಟ್​ ಆಯ್ಕೆಯನ್ನು ನೀಡಿಲ್ಲ. ಹೀಗಾಗಿ ಈ undo ಆಯ್ಕೆಯು ಬಳಕೆದಾರರಿಗೆ ಟ್ವಿಟರ್​ನಲ್ಲಿ ಯಾವುದೇ ಪ್ರಮಾದ ಉಂಟಾಗದಂತೆ ಎಚ್ಚರ ವಹಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...