ಅಬುಧಾಬಿಯ ಶೇಖ್ ಝಾಯೇದ್ ಸ್ಟೇಡಿಯಂನಲ್ಲಿ ಇಂದು ಟಿ ಟ್ವೆಂಟಿ ವಿಶ್ವಕಪ್ ಸೆಮಿಫೈನಲ್ ನ ಮೊದಲನೇ ಪಂದ್ಯ ನಡೆಯುತ್ತಿದ್ದು, ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಈಗಾಗಲೇ ನಾಲ್ಕು ತಂಡಗಳು ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿವೆ. ಇಂಗ್ಲೆಂಡ್ ನ್ಯೂಜಿಲ್ಯಾಂಡ್ ಪಂದ್ಯದ ನಂತರ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವೆ ಸೆಮಿಫೈನಲ್ ನ ಎರಡನೇ ಪಂದ್ಯ ನಡೆಯಲಿದೆ.
ಸಂತ್ರಸ್ತೆ ವಯಸ್ಸಿನ ಆಧಾರದ ಮೇಲೆ ಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡಲಾಗದು: ಸುಪ್ರೀಂ ಅಭಿಮತ
2019 ರಲ್ಲಿ ಏಕದಿನ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡ ಮುಖಾಮುಖಿಯಾದಾಗ ಪಂದ್ಯ ಡ್ರಾ ಆಗಿ ನಂತರ ಸೂಪರ್ ಓವರ್ ನಲ್ಲೂ ಟೈ ಆಗಿತ್ತು. ಈ ರೋಮಾಂಚನಕಾರಿ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ.
ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್ ತಂಡವನ್ನು ವಿಜೇತರೆಂದು ಘೋಷಿಸಲಾಗಿತ್ತು. ನಂತರ ಸಾಕಷ್ಟು ಕ್ರಿಕೆಟ್ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.ಇದೀಗ ಮತ್ತೊಂದು ರೋಮಾಂಚನಕಾರಿ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗಿವೆ.
ಇಂಗ್ಲೆಂಡ್ ತಂಡದ ನಾಯಕ ಇಯೋನ್ ಮಾರ್ಗನ್ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇಬ್ಬರೂ ಅನುಭವಿ ನಾಯಕರಾಗಿದ್ದಾರೆ