ಬೆಂಗಳೂರು: ಜಿಎಸ್ ಟಿ ತೆರಿಗೆ ಇನ್ಸ್ ಪೆಕ್ಟರ್ ಓರ್ವರನ್ನು ಕೂಡಿಹಾಕಿ ಪಬ್ ಮಾಲೀಕ ಹಾಗೂ ಬೌನ್ಸರ್ ಹಲ್ಲೆ ನಡೆಸಿರುವ ಘಟನೆ ಕೋರಮಂಗಲದ ಪಬ್ ನಲ್ಲಿ ಬೆಳಕಿಗೆ ಬಂದಿದೆ.
ಹ್ಯಾಪಿ ಬ್ರೋ ಪಬ್ ಗೆ ಬಂದಿದ್ದ ಜಿ ಎಸ್ ಟಿ ಇನ್ಸ್ ಪೆಕ್ಟರ್ ವಿನಯ್ ಮಂಡಲ್, ನೈಟ್ ಪಾರ್ಟಿ ಮಧ್ಯೆ ಪಬ್ ಮಾಲೀಕ ರಾಕೇಶ್ ಗೌಡ ತೆರಿಗೆ ಇನ್ಸ್ ಪೆಕ್ಟರ್ ಬಳಿ ಬಂದು ಪರಿಚಯ ಮಾಡಿಕೊಂಡಿದ್ದ. ತಡರಾತ್ರಿ 12 ಗಂಟೆ ಬಳಿಕ ಬಿಲ್ ಕೇಳಿದ್ದ. ಈ ವೇಳೆ ಇನ್ಸ್ ಪೆಕ್ಟರ್ ಹಾಗೂ ಮಾಲೀಕನ ನಡುವೆ ಗಲಾಟೆ ಆರಂಭವಾಗಿದೆ. ವಾಗ್ವಾದ ತಾರಕ್ಕೇರಿ ನೀನೊಬ್ಬ ಫೇಕ್ ಜಿಎಸ್ ಟಿ ಇನ್ಸ್ ಪೆಕ್ಟರ್ ಎಂದು ಪಬ್ ಮಾಲೀಕ ವಿನಯ್ ಅವರನ್ನು ಬೈದಿದ್ದಾರೆ.
ಇಬ್ಬರ ನಡುವಿನ ಜಗಳ ತೀವ್ರಸ್ವರೂಪ ಪಡೆದುಕೊಂಡಿದ್ದು, ಜಿಎಸ್ ಟಿ ಇನ್ಸ್ ಪೆಕ್ಟರ್ ನನ್ನು ಕೂಡಿ ಹಾಕಿದ ಪಬ್ ಮಾಲೀಕ ಹಾಗೂ ಬೌನ್ಸರ್, ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಕೋರ ಮಂಗಲ ಪೊಲೀಸ್ ಠಾಣೆಯಲ್ಲಿ ಪಬ್ ಮಾಲೀಕನ ವಿರುದ್ಧ ದೂರು ದಾಖಲಾಗಿದೆ.