ಪ್ರೀತಿಯಲ್ಲಿ ಮೋಸ ಹೋಗುವುದು ಸಾಮಾನ್ಯ. ಆದ್ರೆ ಒಬ್ಬರಿಗಲ್ಲ, ಒಂದೇ ಬಾರಿ 6 ಹುಡುಗಿಯರಿಗೆ ಮೋಸ ಮಾಡುವುದು ಸಾಮಾನ್ಯವಲ್ಲ. ಒಂದೇ ಬಾರಿ 6 ಹುಡುಗಿಯರ ಜೊತೆ ಡೇಟಿಂಗ್ ಮಾಡ್ತಿದ್ದ ಹುಡುಗನ ಬಣ್ಣ ಬಯಲಾಗಿದೆ.
21 ವರ್ಷದ ಮೋರ್ಗನ್ ಪ್ರೀತಿಯಲ್ಲಿ ಬಿದ್ದಿದ್ದಳು. ತನ್ನ ಪ್ರೇಮಿ ಮೇಲೆ ಆಕೆಗೆ ಅನುಮಾನ ಬಂದಿತ್ತು. ಇದೇ ಕಾರಣಕ್ಕೆ ಆತನ ಸಾಮಾಜಿಕ ಜಾಲತಾಣ ಸರ್ಚ್ ಮಾಡಿದ್ದಳು. ಈ ವೇಳೆ ಇಬ್ಬರು ಹುಡುಗಿಯರು ಆಕೆಗೆ ಸ್ನೇಹಿತರಾದ್ರು. ಮೊದಲು, ನಾವೆಲ್ಲ ಒಬ್ಬ ಹುಡುಗನನ್ನೇ ಪ್ರೀತಿ ಮಾಡ್ತಿದ್ದೇವೆ ಎಂಬ ಸಂಗತಿ ಅವರಿಗೆ ತಿಳಿದಿರಲಿಲ್ಲ. ಕೊನೆಯಲ್ಲಿ ವಿಷ್ಯ ಗೊತ್ತಾಗ್ತಿದ್ದಂತೆ, ಪ್ರೇಮಿಗೆ ಬುದ್ದಿ ಕಲಿಸಲು ಮುಂದಾದ್ರು.
ಮೋರ್ಗನ್ ಭೇಟಿಗೆ ಬಂದಾಗ, ಹುಡುಗನಿಗೆ ಶಾಕ್ ಕಾದಿತ್ತು. ಆತನ ಮೂವರು ಗರ್ಲ್ ಫ್ರೆಂಡ್ಸ್ ಒಟ್ಟಿಗೆ ಇದ್ದರು. ಹುಡುಗನ ಬಣ್ಣ ಬಯಲಾದ್ಮೇಲೆ ಆತನ ಜೊತೆ ಸಂಬಂಧ ಮುರಿದುಕೊಳ್ಳಲು ಹುಡುಗಿಯರು ಮುಂದಾದ್ರು. ಈ ಮಧ್ಯೆ ಹುಡುಗ ಮೂವರು ಹುಡುಗಿಯರ ಜೊತೆಯಲ್ಲ 6 ಹುಡುಗಿಯರ ಜೊತೆ ಡೇಟಿಂಗ್ ಮಾಡ್ತಿದ್ದ ಎಂಬುದು ಗೊತ್ತಾಗಿದೆ. ಇದ್ರಿಂದ ಮತ್ತಷ್ಟು ಶಾಕ್ ಆದ ಹುಡುಗಿಯರು, ಈ ನೋವು ಮರೆಯಲು ರೋಡ್ ಟ್ರಿಪ್ ಗೆ ಹೊರಟಿದ್ದಾರೆ. ಇನ್ಸ್ಟಾ ಗ್ರಾಮ್ ನಲ್ಲಿ ತಮ್ಮ ಕಥೆಯನ್ನು ಬರೆದಿದ್ದಾರೆ.