alex Certify ಗುಡ್​ ನ್ಯೂಸ್: ಕೋವ್ಯಾಕ್ಸಿನ್​​​ ಲಸಿಕೆ ಪಡೆದವರಿಗೆ ಬ್ರಿಟನ್​ನಲ್ಲಿ ಇನ್ಮುಂದೆ ಇಲ್ಲ ಕಡ್ಡಾಯ ಕ್ವಾರಂಟೈನ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್​ ನ್ಯೂಸ್: ಕೋವ್ಯಾಕ್ಸಿನ್​​​ ಲಸಿಕೆ ಪಡೆದವರಿಗೆ ಬ್ರಿಟನ್​ನಲ್ಲಿ ಇನ್ಮುಂದೆ ಇಲ್ಲ ಕಡ್ಡಾಯ ಕ್ವಾರಂಟೈನ್​..!

ಭಾರತ್​ ಬಯೋಟೆಕ್​ ಸಂಸ್ಥೆ ತಯಾರಿಸುತ್ತಿರುವ ಕೋವ್ಯಾಕ್ಸಿನ್​ ಲಸಿಕೆಗಳನ್ನು ಬ್ರಿಟನ್​​ ಅನುಮೋದನೆಗೊಂಡ ಕೋವಿಡ್​ ಲಸಿಕೆಗಳ ಪಟ್ಟಿಗೆ ಸೇರಿಸಿದೆ. ಇದರಿಂದ ಬ್ರಿಟನ್​ಗೆ ತೆರಳಲಾಗದೇ ಸಂಕಷ್ಟ ಅನುಭವಿಸುತ್ತಿದ್ದ ಸಾವಿರಾರು ಮಂದಿ ಭಾರತೀಯರು ನಿಟ್ಟುಸಿರು ಬಿಡುವಂತಾಗಿದೆ.

ಬ್ರಿಟನ್​​ನ ಈ ಹೊಸ ಘೋಷಣೆಯಿಂದಾಗಿ ಕೋವ್ಯಾಕ್ಸಿನ್​ ಲಸಿಕೆಯ 2 ಡೋಸ್​ಗಳನ್ನು ಪಡೆದು ನವೆಂಬರ್​ 22ರ ಬಳಿಕ ಬ್ರಿಟನ್​​ಗೆ ಪ್ರಯಾಣಿಸುವವರು ಇಂಗ್ಲೆಂಡ್​ನಲ್ಲಿ ಐಸೋಲೇಷನ್​​ಗೆ ಒಳಗಾಗುವ ಅಗತ್ಯ ಇರುವುದಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯು ಕೋವ್ಯಾಕ್ಸಿನ್​ ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ಬ್ರಿಟನ್​ ಕೂಡ ಈ ಸಿಹಿಸುದ್ದಿಯನ್ನು ನೀಡಿದೆ. ಕಳೆದ ತಿಂಗಳಷ್ಟೇ ಆಕ್ಸ್​ಫರ್ಡ್​-ಆಸ್ಟ್ರೆಜೆನಿಕಾ ಜಂಟಿಯಾಗಿ ತಯಾರಿಸಿದ ಕೋವಿಶೀಲ್ಡ್​​ಗೆ ಬ್ರಿಟನ್​ ಅನುಮೋದನೆ ನೀಡಿತ್ತು. ಇದೀಗ ಕೋವ್ಯಾಕ್ಸಿನ್​ಗೂ ಅನುಮೋದನೆ ದೊರಕಿದ್ದು ಭಾರತೀಯರಿಗೆ ಗುಡ್​ ನ್ಯೂಸ್​ ಸಿಕ್ಕಂತಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಭಾರತದ ಬ್ರಿಟಿಷ್​​ ಹೈಕಮಿಷನರ್​ ಅಲೆಕ್ಸ್​ ಎಲ್ಲಿಸ್​, ಬ್ರಿಟನ್​​ಗೆ ಪ್ರಯಾಣಿಸಲು ಬಯಸುತ್ತಿದ್ದ ಭಾರತೀಯ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ..! ನವೆಂಬರ್​ 22ರಿಂದ ಡಬ್ಲುಹೆಚ್​​ಓನಿಂದ ಅನುಮೋದನೆ ಪಡೆದ ಕೋವ್ಯಾಕ್ಸಿನ್​ ಸೇರಿದಂತೆ ವಿವಿಧ ಯಾವುದೇ ಲಸಿಕೆಗಳನ್ನು ಸ್ವೀಕರಿಸಿದವರು ಬ್ರಿಟನ್​​ನಲ್ಲಿ ಐಸೋಲೇಷನ್​ಗೆ ಒಳಗಾಗುವ ಅಗತ್ಯವಿಲ್ಲ. ಕೋವಿಶೀಲ್ಡ್​ ಜೊತೆಯಲ್ಲಿ ಕೋವ್ಯಾಕ್ಸಿನ್​ ಲಸಿಕೆಯ ಎರಡು ಡೋಸ್​ ಪಡೆದವರೂ ಸಹ ಇನ್ಮುಂದೆ ಐಸೋಲೇಷನ್​ನಿಂದ ಮುಕ್ತಿ ಪಡೆಯಲಿದ್ದಾರೆ ಎಂದು ಬರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...