ಕೆಲವರಿಗೆ ಗರ್ಲ್ ಫ್ರೆಂಡ್ ಇಲ್ಲ ಎನ್ನುವ ಚಿಂತೆ. ಮತ್ತೆ ಕೆಲವರಿಗೆ ಇರುವ ಒಬ್ಬಳನ್ನು ಸಂಭಾಳಿಸುವುದು ಕಷ್ಟ. ಭಾರತದಲ್ಲಿ ಒಂದೇ ಬಾರಿ ಇಬ್ಬರು ಗರ್ಲ್ ಫ್ರೆಂಡ್ ಹೊಂದಿರುವ ಪುರುಷರು ಅಪರೂಪಕ್ಕೆನ್ನುವಂತೆ ಸಿಗ್ತಾರೆ. ಆದ್ರೆ ಚೀನಾದಲ್ಲಿ ಒಂದಕ್ಕಿಂತ ಹೆಚ್ಚು ಗರ್ಲ್ ಫ್ರೆಂಡ್ ಇರಲೇಬೇಕು ಎಂಬ ನಗರವೊಂದಿದೆ.
ಚೀನಾದ ಡೊಂಗುವಾನ್ ನಗರದ ಯುವಕರು ಒಂದಕ್ಕಿಂತ ಹೆಚ್ಚು ಗರ್ಲ್ ಫ್ರೆಂಡ್ ಹೊಂದಿರುತ್ತಾರೆ. ಒಂದೇ ಹುಡುಗಿಯಿದ್ರೆ ಅದು ಮುಜುಗರದ ಸಂಗತಿ. ಇಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಒಂದಕ್ಕಿಂತ ಹೆಚ್ಚು ಗೆಳತಿಯರನ್ನು ಹೊಂದುವುದು ಮಾಮೂಲಿ.
ನಗರದಲ್ಲಿ ಪ್ರತಿ 100 ಮಹಿಳೆಯರಿಗೆ 89 ಪುರುಷರಿದ್ದಾರೆ. ಈ ಜನಸಂಖ್ಯೆಯ ಅಸಮಾನತೆಯಿಂದಾಗಿ ಪುರುಷರಿಗೆ ಸುಲಭವಾಗಿ ಗರ್ಲ್ ಫ್ರೆಂಡ್ಸ್ ಸಿಗ್ತಾರೆ. ಆದರೆ ಬಾಯ್ ಫ್ರೆಂಡ್ ಪಡೆಯಲು, ಹುಡುಗಿಯರು ಸಾಕಷ್ಟು ಪ್ರಯತ್ನ ಪಡಬೇಕು. ಈ ನಗರದಲ್ಲಿ ಕೆಲಸ ಸಿಗುವುದು ಕಷ್ಟ. ಆದರೆ ಗೆಳತಿಯರು ಸುಲಭವಾಗಿ ಸಿಗುತ್ತಾರೆ. ಡೊಂಗುವಾನ್ ನಲ್ಲಿ ಹೆಚ್ಚು ಕಾರ್ಖಾನೆಗಳಿವೆ. ಹುಡುಗಿಯರು ಕಾರ್ಖಾನೆಗಳಲ್ಲಿ ಕೆಲಸ ಮಾಡ್ತಾರೆ. ಅವರು, ಬಾಯ್ ಫ್ರೆಂಡ್ ಹುಡುಕಾಟದಲ್ಲಿರುತ್ತಾರೆ. ಒಬ್ಬ ಹುಡುಗ ಮೂರು ಗರ್ಲ್ ಫ್ರೆಂಡ್ಸ್ ಸಂಭಾಳಿಸುತ್ತಾನೆ. ಹುಡುಗರು ಸಿಗುವುದಿಲ್ಲ ಎಂಬ ಕಾರಣಕ್ಕೆ ಹುಡುಗಿಯರೇ ಖರ್ಚು ಭರಿಸಲು ಸಿದ್ಧರಾಗ್ತಾರೆ. ಆದ್ರೂ ಹುಡುಗರು ಸಿಗುವುದು ಕಷ್ಟ.