ಹಾಸನ: ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹುಂಡಿ ಹಣ ಹಾಗೂ ಟಿಕೆಟ್ ಮತ್ತಿತರ ಮೂಲಗಳಿಂದ ಒಟ್ಟಾರೆ 1,54,37,940 ರೂ. ಸಂಗ್ರಹವಾಗಿದೆ .
ಹಾಸನಾಂಬ ದೇವಾಲಯದ ಹುಂಡಿಯಲ್ಲಿ 83,89,770 ರೂ., ಸಿದ್ದೇಶ್ವರ ದೇವಾಲಯದ ಹುಂಡಿಯಲ್ಲಿ 6,50,355 ರೂ. ಸೇರಿದಂತೆ ಹುಂಡಿಯಲ್ಲಿ 90,40,125 ರೂ. ಸಂಗ್ರಹವಾಗಿದೆ. ಅಲ್ಲದೆ, ಟಿಕೆಟ್ ಮಾರಾಟದಿಂದ 63,97,815 ರೂ. ಸಂಗ್ರಹವಾಗಿದೆ.
ಅ. 28 ರಿಂದ ನ. 6 ರ ವರಗೆ ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆದಿತ್ತು. ನ. 6 ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಾಲಯದ ಬಾಗಿಲು ಹಾಕಲಾಗಿತ್ತು. ಸೋಮವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದೆ. ಎಂದು ದೇವಾಯದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಬಿ.ಎ. ಜಗದೀಶ್ ತಿಳಿಸಿದ್ದಾರೆ.