ಮೇಷ : ಇಂದು ನೀವು ಹಣ ಗಳಿಕೆ ಮಾಡಲು ಹೊಸ ಮಾರ್ಗವನ್ನು ಹುಡುಕಲಿದ್ದೀರಿ. ರಾಜಕೀಯ ವ್ಯಕ್ತಿಗಳು ಸಾಕಷ್ಟು ಸಮಾಜಸೇವಿ ಕೆಲಸಗಳನ್ನು ಮಾಡುವ ಮೂಲಕ ಪ್ರಶಂಸೆಗಿಟ್ಟಿಸಿಕೊಳ್ಳಲಿದ್ದಾರೆ.
ವೃಷಭ : ಕುಟುಂಬದಲ್ಲಿ ಆಘಾತಕಾರಿ ಘಟನೆಯೊಂದು ಜರುಗಲಿದೆ. ಈ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೇ ಸಮರ್ಥವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಿ. ವಿದ್ಯಾರ್ಥಿಗಳಿಗೆ ಈ ದಿನ ಶುಭಕರವಾಗಿ ಇರಲಿದೆ. ಜವಳಿ ಉದ್ಯಮಿಗಳಿಗೆ ಲಾಭವಿದೆ.
ಮಿಥುನ : ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಿಮಗೆ ಕುಟುಂಬಸ್ಥರು ಹೆಗಲು ನೀಡಲಿದ್ದಾರೆ. ಇದರಿಂದ ಬೆಟ್ಟದಂತ ಕಷ್ಟ ಮಂಜಿನಂತೆ ಕರಗಲಿದೆ. ನಿಮಗಿಂತ ಕೆಳಹಂತದ ಕೆಲಸದವರ ಜೊತೆಯಲ್ಲಿ ಸೌಮ್ಯದಿಂದ ವರ್ತಿಸಿ. ಯಾರೊಂದಿಗೂ ದರ್ಪದಿಂದ ವರ್ತಿಸಬೇಡಿ.
ಕಟಕ : ಕಚೇರಿ ಕೆಲಸದ ನಿಮಿತ್ತ ವಿದೇಶಿ ಪ್ರಯಾಣ ಮಾಡುವ ಯೋಗ ನಿಮ್ಮದಾಗಲಿದೆ. ಮಕ್ಕಳು ಓದಿನ ಕಡೆಗೆ ಕಡಿಮೆ ಲಕ್ಷ್ಯ ತೋರಲಿದ್ದಾರೆ. ಇದು ನಿಮ್ಮ ನೆಮ್ಮದಿಯನ್ನು ಕೆಡಿಸಲಿದೆ. ಅತಿಯಾದ ಖರ್ಚು ಒಳ್ಳೆಯದಲ್ಲ.
ಸಿಂಹ : ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.
ಕನ್ಯಾ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.
ತುಲಾ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.
ವೃಶ್ಚಿಕ : ಕಚೇರಿಯಲ್ಲಿ ಇಂದು ನೀವು ಕಿರಿಕಿರಿಯನ್ನು ಎದುರಿಸಲಿದ್ದೀರಿ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ. ಸಂಗಾತಿಯೊಡನೆ ವಿನಾಕಾರಣ ಜಗಳ ಮಾಡಿಕೊಳ್ಳಲಿದ್ದೀರಿ. ಇದರಿಂದ ಕುಟುಂಬದ ನೆಮ್ಮದಿ ಹಾಳಾಗಲಿದೆ.
ಧನು : ಅನವಶ್ಯಕ ಖರ್ಚುಗಳ ಮೇಲೆ ನಿಯಂತ್ರಣ ಸಾಧಿಸದ ಹೊರತು ನಿಮಗೆ ಆರ್ಥಿಕವಾಗಿ ಸದೃಢರಾಗಲು ಸಾಧ್ಯವೇ ಇಲ್ಲ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಲಿದೆ. ಕಲಾವಿದರಿಗೆ ಇಂದು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ.
ಮಕರ : ಸಂಗಾತಿಯೊಡನೆ ಅತಿಯಾಗಿ ಅನುಮಾನ ಪಡೋದನ್ನು ನಿಲ್ಲಿಸಿ. ನಿಮ್ಮ ಈ ಗುಣವು ದಾಂಪತ್ಯ ಜೀವನವನ್ನು ಹಾಳುಗೆಡವಲಿದೆ. ಉದ್ಯೋಗ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು.
ಕುಂಭ : ನಿಮಗೆ ಇಂದು ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಬಡ್ತಿ ಭಾಗ್ಯ ಕೂಡ ನಿಮ್ಮದಾಗಬಹುದು. ಅತಿಯಾಗಿ ಹಣ ಖರ್ಚು ಮಾಡಬೇಡಿ.
ಮೀನ : ಮೇಲಾಧಿಕಾರಿಗಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಹೊಂದಲು ಯತ್ನಿಸಲಿದ್ದೀರಿ. ನೌಕರಿ ಬದಲಾವಣೆ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಪೋಷಕರು ನಿಮ್ಮ ಮನಸ್ಸಿಗೆ ನೋವುಂಟು ಮಾಡಲಿದ್ದಾರೆ. ಕಾನೂನಿನ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯಿಂದಿರಿ.