ಮಂಡ್ಯ: ಬಿಜೆಪಿ ನಾಯಕರಂತ ಜಾತಿವಾದಿಗಳು ಇನ್ಯಾರೂ ಇಲ್ಲ. ನನ್ನ ವಿರುದ್ಧ ಅನಗತ್ಯವಾಗಿ ಅಪಪ್ರಚಾರಗಳನ್ನು ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಇತಿಹಾಸ ಪುರುಷರ ಜಯಂತಿ ಆಚರಿಸಿದ್ದು ನಾನು. ಕೆಂಪೇಗೌಡ, ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್, ಭಗೀರತ, ಕೃಷ್ಣ, ಜೈನ ಜಯಂತಿ ಆಚರಣೆಗೆ ತಂದಿದ್ದು ನಾನು ಆದರೆ ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡಿ ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಕ್ಕೆ ಬಿಜೆಪಿ ನಾಯಕರಿಗೆ ಹೊಟ್ಟೆ ಉರಿ ಹಾಗಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನನ್ನ ವಿರುದ್ಧ ಪ್ರತಿಭಟನೆಗಳನ್ನು ಮಾಡಿ, ನನ್ನ ಫ್ಲೆಕ್ಸ್ ಸುಟ್ಟ ತಕ್ಷಣ ನಾನು ಸುಟ್ಟುಹೋಗಲ್ಲ. ಅಥವಾ ನನ್ನ ಜನ, ನನ್ನ ಪ್ರೀತಿಸುವವರು ಸುಟ್ಟು ಹೋಗಲ್ಲ. ಬಿಜೆಪಿ ನಾಯಕರ ಪ್ರತಿಭಟನೆಗಳಿಗೆ ನಾವು ಹೆದರುವುದೂ ಇಲ್ಲ ಎಂದು ಗುಡುಗಿದ್ದಾರೆ.