ನೃತ್ಯ ಮತ್ತು ಸಂಗೀತವಿಲ್ಲದೆ ಇತ್ತೀಚೆಗಿನ ಭಾರತೀಯ ವಿವಾಹವು ಅಪೂರ್ಣವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಮದುವೆಯ ಸೀಸನ್ ಸಮೀಪಿಸುತ್ತಿರುವಾಗ, ಭಾರತೀಯ ವಿವಾಹಗಳ ತಮಾಷೆಯ ಮತ್ತು ಹೃದಯಸ್ಪರ್ಶಿ ವಿಡಿಯೋಗಳು ಪ್ರತಿದಿನವೂ ವೈರಲ್ ಆಗುತ್ತವೆ. ಅಂತಹ ಒಂದು ಸುಂದರವಾದ ವಿಡಿಯೋ ವೈರಲ್ ಆಗಿದೆ.
ಹೆಚ್ಚಾಗಿ ಮದುವೆಯಲ್ಲಿ ವಧು-ವರರು ಅಥವಾ ಸಂಬಂಧಿಕರು, ತಾಯಿ ಹಾಗೂ ವಧು ನೃತ್ಯ ಮಾಡಿರುವುದರ ವಿಡಿಯೋ ನೀವು ನೋಡಿರಬಹುದು. ಆದರೆ, ಇಲ್ಲಿ ವಧು ಹಾಗೂ ಆಕೆಯ ತಂದೆ ಮನೋಜ್ಞವಾಗಿ ನರ್ತಿಸಿದ್ದಾರೆ. ಹೌದು, ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ತನ್ನ ತಂದೆಯೇ ಮೊದಲ ಹೀರೋ…. ತಂದೆ-ಮಗಳ ಸುಮಧುರ ಬಾಂಧವ್ಯವನ್ನು ಪದಗಳಲ್ಲಿ ಕಟ್ಟಿಕೊಡಲು ಅಸಾಧ್ಯ. ಹಾಗೆಯೇ ಇಲ್ಲಿ ತನ್ನ ಮದುವೆಯ ದಿನದಂದು ವಧುವೊಬ್ಬಳು ತಂದೆಯ ಜೊತೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ.
ಬಿಜೆಪಿಯವರಂಥ ಜಾತಿವಾದಿಗಳು ಬೇರೊಬ್ಬರಿಲ್ಲ; ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ
ಈ ಸುಂದರವಾದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವೆಡ್ಡಿಂಗ್ ಕೊರಿಯೋಗ್ರಾಫರ್ಸ್ ಎಂಬ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ವಧುವು ಸುಂದರವಾದ ಲೆಹೆಂಗಾ ತೊಟ್ಟು ಮಿಂಚುತ್ತಿದ್ದರೆ, ಆಕೆಯ ತಂದೆ ನೀಲಿ ಕುರ್ತಾ ಪೈಜಾಮಾ ತೊಟ್ಟಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ತಂದೆ-ಮಗಳ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.
https://youtu.be/MTEALAOWvPQ