ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದಲೇ ಜಾರಿಗೆ ಬರುವಂತೆ ಹೋಟೆಲ್ ನಲ್ಲಿ ಊಟ, ತಿಂಡಿ, ಕಾಫಿ, ಟೀ ದುಬಾರಿಯಾಗಲಿದೆ.
ಊಟ, ತಿಂಡಿ, ದರ 10 ರೂಪಾಯಿ ಜಾಸ್ತಿಯಾಗಿದ್ದು, ಟೀ, ಕಾಫಿ ದರವನ್ನು 2 ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಹೊಸ ದರಗಳು ಜಾರಿಗೆ ಬರಲಿದೆ. ಗ್ಯಾಸ್, ದಿನಸಿ, ತರಕಾರಿ ದರ ಏರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕೊರೋನಾ ಕಾರಣದಿಂದ ಮೊದಲೇ ಸಂಕಷ್ಟದಲ್ಲಿದ್ದ ಹೋಟೆಲ್ ಉದ್ಯಮ ದಿನಸಿ, ತರಕಾರಿ, ಗ್ಯಾಸ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಎದುರಾಗಿದೆ. ಈ ಕಾರಣದಿಂದ ಊಟ, ತಿಂಡಿ, ಕಾಫಿ, ಟೀ ಬೆಲೆಗಳಲ್ಲಿ ಶೇಕಡ 5 ರಿಂದ 10 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ ತಿಳಿಸಿದ್ದಾರೆ. ಎಲ್ಲ ತರಕಾರಿಗಳ ಬೆಲೆ 50 ರೂಪಾಯಿ ಆಸುಪಾಸಿನಲ್ಲಿದೆ. ವಾಣಿಜ್ಯ ಬಳಕೆ ಸಿಲಿಂಡರ್ 2233 ರೂ.ಗೆ ತಲುಪಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಹೇಳಲಾಗಿದೆ.