ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಹೇಳಿದಂತೆ ನಾನು ಕೇಳುತ್ತೇನೆ. ನಾನು ಯಾವ ಪಕ್ಷದಲ್ಲಿರಬೇಕು ಎಂಬುದನ್ನು ಜನರು ತೀರ್ಮಾನಿಸುತ್ತಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ನಿರ್ಧಾರ ಯಾವತ್ತೂ ಬದಲಾಗಲ್ಲ, ಕುಮಾರಸ್ವಾಮಿಯವರಿಗೆ ನನ್ನ ಮೇಲೆ ಯಾವ ಅಭಿಪ್ರಾಯ ಬೇಕಾದರೂ ಇರಲಿ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.
BREAKING NEWS: ಪೆಟ್ರೋಲ್ 10 ರೂ., ಡೀಸೆಲ್ 5 ರೂ. ಇಳಿಕೆ ಮಾಡಿದ ಕಾಂಗ್ರೆಸ್ ಆಡಳಿತದ ಪಂಜಾಬ್ ಸರ್ಕಾರ
ಕ್ಷೇತ್ರದ ಜನರು ನನ್ನನ್ನು ಆಹ್ವಾನಿಸಿದಾಗ ಹೋಗಲೇಬೇಕು. ಸಿಎಂ ಬೊಮ್ಮಾಯಿ ಬಂದಾಗಲೂ ಅವರ ಜತೆ ವೇದಿಕೆ ಹಂಚಿಕೊಂಡಿದ್ದೆ. ಈಗ ಸಿದ್ದರಾಮಯ್ಯ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈಗಲೂ ಹೋಗುತ್ತಿದ್ದೇನೆ. ಮುಂದೆ ನಾನು ಯಾವ ಪಕ್ಷದಲ್ಲಿ ಇರಬೇಕು ಎಂಬುದನ್ನು ಜನ ಹೇಳುತ್ತಾರೆ. ಅವರು ಹೇಳಿದಂತೆ ನಾನು ನಡೆದುಕೊಳ್ಳುತ್ತೇನೆ. ಜೆಡಿಎಸ್ ನಲ್ಲಿ ಆದ ಅವಮಾನದ ಬಗ್ಗೆ ಹೆಚ್.ಡಿ. ದೇವೇಗೌಡರ ಜೊತೆ ಚರ್ಚೆ ಮಾಡಿದ್ದೇನೆ. ನೀನು ಮರಿ ದೇವೇಗೌಡ ಅಂದುಕೊಂಡಿದ್ದೇನೆ. ನೀನು ನನ್ನ ಜೊತೆಯೇ ಇರಬೇಕು ಎಂದು ಹೇಳಿದ್ದರು. ಆಗ ನಾನು ದಯವಿಟ್ಟು ಕ್ಷಮಿಸಿ. ನನ್ನೊಂದಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸುಳಿವು ನೀಡಿದ್ದಾಗಿ ತಿಳಿಸಿದರು.