ಭಾರತ ಮತ್ತು ಪಾಕಿಸ್ತಾನ ಕಬಡ್ಡಿ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 2022 ರಲ್ಲಿ ಕರ್ತಾರ್ಪುರ ಕಾರಿಡಾರ್ನಲ್ಲಿ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಆಡಲಿವೆ. ಲಾಹೋರ್ನಲ್ಲಿ ನಾಲ್ಕು ರಾಷ್ಟ್ರಗಳ ಪಂದ್ಯಾವಳಿ ಪ್ರಾರಂಭವಾಗುವ ಕೆಲವೇ ವಾರಗಳ ಮೊದಲು ಈ ಪಂದ್ಯ ಆಡಲಾಗುತ್ತದೆ.
ಪಾಕಿಸ್ತಾನ್ ಕಬಡ್ಡಿ ಫೆಡರೇಷನ್(ಪಿಕೆಎಫ್) ಕಾರ್ಯದರ್ಶಿ ರಾಣಾ ಮೊಹಮ್ಮದ್ ಸರ್ವರ್ ಇದನ್ನು ಖಚಿತಪಡಿಸಿದ್ದಾರೆ. ಕರ್ತಾರ್ಪುರ ಕಾರಿಡಾರ್ನಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲು ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳು ಒಪ್ಪಿಕೊಂಡಿರುವುದರಿಂದ ನಾವು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದೇವೆ. ಎರಡೂ ಒಕ್ಕೂಟಗಳು ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಸ್ಪರ್ಧಿಸಲು ಎರಡೂ ತಂಡಗಳು ಗಡಿಯ ಎರಡೂ ಕಡೆಯಿಂದ ಪ್ರಯಾಣಿಸಲು ಒಪ್ಪಿಕೊಂಡಿವೆ ಎಂದು ಸರ್ವರ್ ಹೇಳಿದ್ದಾರೆ.
ಆಶಾದಾಯಕ ಬೆಳವಣಿಗೆಯಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಅಂತರರಾಷ್ಟ್ರೀಯ ಪಂದ್ಯವನ್ನು ಆಯೋಜಿಸಲಾಗುವುದು. ನಾವು ಏಪ್ರಿಲ್ನಲ್ಲಿ ಲಾಹೋರ್ನಲ್ಲಿ ನಾಲ್ಕು ರಾಷ್ಟ್ರಗಳ ಅಂತರರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಲಿರುವುದರಿಂದ, ಅಂತರರಾಷ್ಟ್ರೀಯ ಈವೆಂಟ್ಗೆ ಕೆಲವೇ ವಾರಗಳ ಮೊದಲು ಮಾರ್ಚ್ನಲ್ಲಿ ಸೌಹಾರ್ದ ಪಂದ್ಯವನ್ನು ಆಯೋಜಿಸಲು ಬಯಸುತ್ತೇವೆ. ಪಾಕಿಸ್ತಾನವನ್ನು ಹೊರತುಪಡಿಸಿ ಭಾರತ, ಕೆನಡಾ ಮತ್ತು ಇರಾನ್ ನಾಲ್ಕು ರಾಷ್ಟ್ರಗಳ ಈವೆಂಟ್ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. ಈ ನಾಲ್ಕು ದೇಶಗಳು ವಿಶ್ವದ ಅತ್ಯುತ್ತಮ ತಂಡಗಳನ್ನು ಹೊಂದಿವೆ. ಅಭಿಮಾನಿಗಳಿಗೆ ಗುಣಮಟ್ಟದ ಕಬಡ್ಡಿಯನ್ನು ನೀಡುವ ನಿರೀಕ್ಷೆಯಿದೆ. ಭಾಗವಹಿಸುವ ಎಲ್ಲಾ ತಂಡಗಳು ಈವೆಂಟ್ಗಾಗಿ ಕುತೂಹಲದಿಂದ ಎದುರು ನೋಡುತ್ತಿವೆ ಎಂದು ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಕಬಡ್ಡಿ ಅತ್ಯಂತ ಹೆಚ್ಚು ಹಾನಿಗೊಳಗಾದ ಕ್ರೀಡೆಯಾಗಿದೆ ಎಂದು ಅವರು ತಿಳಿಸಿದ್ದು, ಇದು ಸಂಪರ್ಕ ಕ್ರೀಡೆಯಾಗಿರುವುದರಿಂದ, ಸಮಯ ಕಠಿಣವಾಗಿತ್ತು. ನಾವು ಶಿಬಿರ, ಸ್ಥಳೀಯ ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲು ಕಷ್ಟಪಟ್ಟಿದ್ದೇವೆ. ಆದರೆ, ಈಗ ಎಲ್ಲವೂ ಮುಕ್ತವಾಗಿದ್ದು, ನಾವು ಸಂಪೂರ್ಣ ಸಹಜ ಸ್ಥಿತಿಗೆ ಮರಳಲು ಸಿದ್ಧರಿದ್ದೇವೆ. ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮತ್ತು ನಾಲ್ಕು ರಾಷ್ಟ್ರಗಳ ಪಂದ್ಯಾವಳಿಯು ಅಂತರಾಷ್ಟ್ರೀಯ ಕಬಡ್ಡಿ ಪಂದ್ಯ ಭಾರಿ ನಿರೀಕ್ಷೆ ಮೂಡಿಸಿದೆ ಎಂದಿದ್ದಾರೆ.