ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ಮುಂದುವರೆದಿದೆ. ಮನೆ ಮನೆಗೆ ಕೊರೊನಾ ಲಸಿಕೆ ಅಭಿಯಾನವನ್ನೂ ಪ್ರಾರಂಭಿಸಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಇದೀಗ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ಪೋರ್ಟ್ ಮತ್ತು ರೇಷನ್ ಕಾರ್ಡ್ ಪಡೆಯಲು ಕೊರೊನಾ ಲಸಿಕೆ ಸರ್ಟಿಫಿಕೇಟ್ ಕಡ್ಡಾಯವಾಗಿದೆ.
ಯುಪಿಯ ಗಾಜಿಯಾಬಾದ್ನಲ್ಲಿ, ಚಾಲನಾ ಪರವಾನಗಿ ಮತ್ತು ಅದ್ರ ನವೀಕರಣ ಸೇರಿದಂತೆ ಇತರ ಕೆಲಸಗಳಿಗೆ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯವಾಗಿದೆ. ಕೊರೊನಾ ಲಸಿಕೆ ಪಡೆಯದೆ ಹೋದಲ್ಲಿ ಆರ್ಟಿಒ ಕಚೇರಿಯ ಕೆಲಸ ಅರ್ಧಕ್ಕೆ ನಿಲ್ಲಲಿದೆ.
BIG NEWS: ಕೊರೊನಾದಿಂದ 5 ಲಕ್ಷ ಜನ ಸಾವು…..! ಮತ್ತೆ ಭಯ ಹುಟ್ಟಿಸಿದ WHO
ನಿರ್ಮಾಣ ಕಾರ್ಯಗಳು ನಡೆಯುತ್ತಿರುವ ಇಲಾಖೆಗಳಿಗೂ ಹೊಸ ಆದೇಶ ಹೊರಡಿಸಲಾಗಿದೆ. ಕಟ್ಟಡ ನಿರ್ಮಾಣ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರಿಗೆ ಲಸಿಕೆ ಹಾಕುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಅಂಗಡಿಕಾರರು, ಟ್ಯಾಕ್ಸಿ ಮತ್ತು ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳಿಗೂ ಕೊರೊನಾ ಲಸಿಕೆ ಕಡ್ಡಾಯವಾಗಿದೆ. ಮೇಘಾಲಯದ ಹಲವು ಜಿಲ್ಲೆ, ಗುಜರಾತ್ನಂತಹ ಇತರ ರಾಜ್ಯಗಳ ಸರ್ಕಾರ ಕೂಡ ಇದೇ ರೀತಿ ಆದೇಶವನ್ನು ಹೊರಡಿಸಿದೆ. ಕೊರೊನಾ ಲಸಿಕೆ ಪಡೆಯದ ಜನರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುವುದಿಲ್ಲ. ಕೊರೊನಾ ನಿಯಂತ್ರಣಕ್ಕೆ ಕೊರೊನಾ ಲಸಿಕೆ ಮಹತ್ವದ ಕೆಲಸ ಮಾಡ್ತಿದೆ.