alex Certify BIG NEWS: ಡ್ರಗ್ಸ್ ಪ್ರಕರಣದ ತನಿಖೆಯಿಂದ ಕೊಕ್ ನೀಡಿದ ಬಗ್ಗೆ ಸಮೀರ್ ವಾಂಖೆಡೆ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡ್ರಗ್ಸ್ ಪ್ರಕರಣದ ತನಿಖೆಯಿಂದ ಕೊಕ್ ನೀಡಿದ ಬಗ್ಗೆ ಸಮೀರ್ ವಾಂಖೆಡೆ ಸ್ಪಷ್ಟನೆ

ನವದೆಹಲಿ: ಇಂದು ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ಶಾರುಖ್ ಪುತ್ರನ ಹೈಪ್ರೊಫೈಲ್ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದ ತನಿಖೆಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ(ಎನ್‌ಸಿಬಿ) ದೆಹಲಿ ತಂಡ ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ.

ಡ್ರಗ್ಸ್ ಪ್ರಕರಣ ಮತ್ತು ಇತರ 5 ಪ್ರಕರಣಗಳು ಸೇರಿದಂತೆ ಒಟ್ಟು 6 ಪ್ರಕರಣಗಳನ್ನು ಈಗ ಎನ್‌.ಸಿ.ಬಿ.ಯ ದೆಹಲಿ ತಂಡಗಳು ತನಿಖೆ ನಡೆಸಲಿವೆ ಎಂದು ಎನ್‌ಸಿಬಿಯ ನೈಋತ್ಯ ವಲಯದ ಉಪ ಮಹಾನಿರ್ದೇಶಕ ಮುತಾ ಅಶೋಕ್ ಜೈನ್ ಶುಕ್ರವಾರ ಮಾಹಿತಿ ನೀಡಿದ್ದು, ಇದು ಆಡಳಿತಾತ್ಮಕ ನಿರ್ಧಾರ ಎಂದು ಹೇಳಿದ್ದಾರೆ.

ಈ ನಡುವೆ, ಬೆಳವಣಿಗೆಯ ಕುರಿತು ಮಾತನಾಡಿದ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ನನ್ನನ್ನು ತನಿಖೆ ತಂಡದಿಂದ ತೆಗೆದುಹಾಕಿಲ್ಲ. ಈ ವಿಷಯವನ್ನು ಕೇಂದ್ರೀಯ ಸಂಸ್ಥೆಯಿಂದ ತನಿಖೆ ಮಾಡಬೇಕೆಂದು ನ್ಯಾಯಾಲಯದಲ್ಲಿ ನನ್ನ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಆದ್ದರಿಂದ ಆರ್ಯನ್ ಪ್ರಕರಣ ಮತ್ತು ಸಮೀರ್ ಖಾನ್ ಪ್ರಕರಣವನ್ನು ದೆಹಲಿ ಎನ್‌ಸಿಬಿಯ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇದು ದೆಹಲಿ ಮತ್ತು ಮುಂಬೈನ ಎನ್‌ಸಿಬಿ ತಂಡಗಳ ನಡುವಿನ ಸಮನ್ವಯದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆರ್ಯನ್ ಖಾನ್ ಪ್ರಕರಣ ಮತ್ತು ಇತರ 5 ಪ್ರಕರಣಗಳು ಸೇರಿದಂತೆ ಮುಂಬೈ ವಲಯದ 6 ಪ್ರಕರಣಗಳ ತನಿಖೆಗಾಗಿ ದೆಹಲಿ ಎನ್‌ಸಿಬಿ ತಂಡ ನಾಳೆ ಮುಂಬೈಗೆ ಆಗಮಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮೀರ್ ವಾಂಖೆಡೆ ಅವರನ್ನು ಆರ್ಯನ್ ಖಾನ್ ಪ್ರಕರಣ ಸೇರಿದಂತೆ 5 ಪ್ರಕರಣಗಳಿಂದ ಕೈಬಿಡಲಾಗಿದೆ ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿಕೆ ನೀಡಿದ ನಂತರ ಸ್ಪಷ್ಟನೆ ನೀಡಲಾಗಿದೆ.

ಸಮೀರ್ ವಾಂಖೆಡೆ ಎನ್‌ಸಿಬಿಯ ದೆಹಲಿ ಕಚೇರಿಗೆ ಹೋಗಿ ವರದಿ ಮಾಡಿಕೊಳ್ಳಲಿದ್ದಾರೆ. ಸಂಜಯ್ ಸಿಂಗ್ ಮುಂಬೈ ವಲಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಮುಂಬೈ ಕ್ರೂಸ್ ಮೇಲಿನ ದಾಳಿ, ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣಗಳನ್ನು ಐಜಿ ಶ್ರೇಣಿಯ ಅಧಿಕಾರಿಗಳು ತನಿಖೆ ನಡೆಸುತ್ತಾರೆ ಎಂದು ಹೇಳಲಾಗಿದೆ.

ಡ್ರಗ್ಸ್ ಆನ್ ಕ್ರೂಸ್ ಕೇಸ್:

ಅಕ್ಟೋಬರ್ 3 ರಂದು ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡ ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡಿತ್ತು. ಈ ವೇಳೆ ನಟ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಕೆಲವರನ್ನು ಬಂಧಿಸಲಾಗಿತ್ತು.

ಈ ಪ್ರಕರಣದ ಪ್ರಮುಖ ಟ್ವಿಸ್ಟ್‌ ನಲ್ಲಿ, ಎನ್‌ಸಿಬಿಯ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್, ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡಲು ಎನ್‌ಸಿಬಿಯ ಅಧಿಕಾರಿ ಮತ್ತು ಕೆ.ಪಿ. ಗೋಸಾವಿ ಸೇರಿದಂತೆ ಇತರ ವ್ಯಕ್ತಿಗಳು 25 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಸಮೀರ್ ವಾಂಖೆಡೆ ಮುಂಬೈನ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ ತಮ್ಮ ಅಫಿಡವಿಟ್‌ಗಳಲ್ಲಿ ಈ ಆರೋಪ ತಳ್ಳಿಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...