alex Certify BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಗೇಮ್​ ಚೇಂಜರ್ ಆಗಲಿರುವ ಸೋಂಕು ನಿರೋಧಕ ಮಾತ್ರೆಗೆ ಬ್ರಿಟನ್​ ಅನುಮೋದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಗೇಮ್​ ಚೇಂಜರ್ ಆಗಲಿರುವ ಸೋಂಕು ನಿರೋಧಕ ಮಾತ್ರೆಗೆ ಬ್ರಿಟನ್​ ಅನುಮೋದನೆ

ಕೊರೊನಾ ನಿರೋಧಕ ಮಾತ್ರೆ ಮೊಲ್ನುಪಿರವಿರ್​​ಗೆ ಅನುಮೋದನೆ ನೀಡುವ ಮೂಲಕ ಕೊರೊನಾ ಸೋಂಕಿನ ವಿರುದ್ಧ ಮಾತ್ರೆ ಬಳಕೆಗೆ ಸಮ್ಮತಿ ನೀಡಿದ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್​ ಪಾತ್ರವಾಗಿದೆ. ಅಮೆರಿಕ ಮೂಲದ ಮರ್ಕ್​ ಹಾಗೂ ರಿಡ್ಜ್​ಬ್ಯಾಕ್​ ಬಯೋ ಥೆರಪಿಸ್ಟಿಕ್ಸ್​ ಕಂಪನಿಗಳ ಸಹಭಾಗಿತ್ವದಲ್ಲಿ ಈ ಕೊರೊನಾ ನಿರೋಧಕ ಮಾತ್ರೆಗಳನ್ನು ತಯಾರಿಸಲಾಗಿದೆ.

ಬ್ರಿಟನ್​​ನ ಔಷಧಗಳು ಹಾಗೂ ಆರೋಗ್ಯ ಉತ್ಪನ್ನ ನಿಯಂತ್ರಣ ಸಂಸ್ಥೆಯು ಕೊರೊನಾ ನಿರೋಧಕ ಮಾತ್ರೆಗಳಿಗೆ ಹಸಿರು ನಿಶಾನೆ ತೋರಿದೆ. ಸೌಮ್ಯ ಹಾಗೂ ಮಧ್ಯಮ ಪ್ರಮಾಣದಲ್ಲಿ ಸೋಂಕನ್ನು ಹೊಂದಿರುವವರಿಗೆ ಈ ಮಾತ್ರೆಗಳನ್ನು ನೀಡಲು ಶಿಫಾರಸು ಮಾಡಲಾಗಿದೆ. ಕೊರೊನಾ ಸೋಂಕನ್ನು ಹೊಂದಿದ ಐದು ದಿನಗಳ ಒಳಗೆ ದಿನಕ್ಕೆ 2 ಮಾತ್ರೆಗಳನ್ನು ನೀಡಲಾಗುತ್ತದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಬ್ರಿಟನ್​ ಆರೋಗ್ಯ ಕಾರ್ಯದರ್ಶಿ ಸಾಜಿದ್​ ಜಾವಿದ್​, ಇಡೀ ವಿಶ್ವದಲ್ಲಿಯೇ ಕೋವಿಡ್​ ವಿರುದ್ಧದ ಹೋರಾಟಕ್ಕೆ ಮಾತ್ರೆಗಳ ಬಳಕೆಗೆ ಅನುಮೋದನೆ ನೀಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಬ್ರಿಟನ್​ ಪಾತ್ರವಾಗಿದೆ. ಈ ಮಾತ್ರೆಯು ಕೊರೊನಾ ವಿರುದ್ಧದ ಹೋರಾಟದಲ್ಲಿ ಗೇಮ್​ ಚೇಂಜರ್​ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...