ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಇಂದು ಶ್ರೀ ಆದಿಗುರು ಶಂಕರಾಚಾರ್ಯರ ಪುತ್ಥಳಿ ಅನಾವರಣ ಮಾಡಿದ್ದಾರೆ. ಮೊದಲಿಗೆ ಕೇದಾರನಾಥನ ದರ್ಶನ ಪಡೆದ ಅವರು ಶಂಕರಾಚಾರ್ಯರ ಪುತ್ಥಳಿ ಅನಾವರಣಗೊಳಿಸಿದ್ದಾರೆ.
ಅಭಿವೃದ್ಧಿಪಡಿಸಲಾದ ಶಂಕರಾಚಾರ್ಯರ ಸಮಾಧಿ ಸ್ಥಳ ವೀಕ್ಷಿಸಿದ್ದಾರೆ. 400 ಕೋಟಿ ರೂಪಾಯಿ ವೆಚ್ಚದ ಕೇದಾರಪುರಿ ಮರು ನಿರ್ಮಾಣ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಶಂಕರಾಚಾರ್ಯರ ಭವ್ಯ ಪುತ್ಥಳಿಯನ್ನು ನಿರ್ಮಿಸಿದ್ದಾರೆ. 5 ತಲೆಮಾರಿನಿಂದ ಕಲ್ಲಿನ ಕೆತ್ತನೆಯಲ್ಲಿ ಅರುಣ್ ಯೋಗಿರಾಜ್ ಕುಟುಂಬ ನೈಪುಣ್ಯತೆ ಪಡೆದುಕೊಂಡಿದೆ. ಪ್ರಧಾನಿ ಕಚೇರಿಯಿಂದ ಅವರಿಗೆ ಪುತ್ಥಳಿ ಸ್ಥಾಪನೆಗೆ ತಿಳಿಸಲಾಗಿತ್ತು. 12 ಅಡಿ ಎತ್ತರದ 35 ಟನ್ ತೂಕದ ಶಂಕರಾಚಾರ್ಯರ ಪುತ್ಥಳಿ ಕುಳಿತ ಭಂಗಿಯಲ್ಲಿದೆ.