ಬೆಂಗಳೂರು: ಹೋಟೆಲ್ ಗಳಲ್ಲಿ ಊಟ, ತಿಂಡಿ ದರ ಬಲು ದುಬಾರಿಯಾಗಲಿದೆ. ನವೆಂಬರ್ 8 ರಿಂದ ಶೇಕಡ 15 ರಿಂದ 20 ರಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ. ದಿನಸಿ ಸೇರಿ ಅಗತ್ಯ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವ ಪರಿಣಾಮ ಹೋಟೆಲ್ ಗಳಲ್ಲಿ ತಿಂಡಿ-ತಿನಿಸುಗಳ ದರ ಹೆಚ್ಚಳವಾಗಲಿದೆ.
ದಿನಸಿ, ತರಕಾರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾರಣ ರಾಜ್ಯಾದ್ಯಂತ ನವೆಂಬರ್ 8 ರ ನಂತರ ಹೋಟೆಲ್ ಗಳಲ್ಲಿ ದರ ಶೇಕಡ 15 ರಿಂದ 20 ರಷ್ಟು ಹೆಚ್ಚಳ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರ 2000 ರೂ.ಗಿಂತಲೂ ಅಧಿಕವಾಗಿದೆ. ಇದರಿಂದ ಹೋಟೆಲ್ ಉದ್ಯಮದ ಮೇಲೆ ಹೊಡೆತ ಬಿದ್ದಿದೆ. ಮೊದಲೇ ಕೊರೋನಾ ಪರಿಣಾಮದಿಂದ ಸಂಕಷ್ಟದಲ್ಲಿದ್ದ ಹೋಟೆಲ್ ಮಾಲೀಕರಿಗೆ ಸಂಕಷ್ಟ ಅಗತ್ಯವಸ್ತು, ಸಿಲಿಂಡರ್ ದರ ಭಾರಿ ಹೆಚ್ಚಳದಿಂದ ಸಂಕಷ್ಟವಾಗಿದ್ದು, ಹೀಗಾಗಿ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ನ. 8 ರಿಂದ ತಿಂಡಿ ಬೆಲೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.