alex Certify ಶಾಕಿಂಗ್‌: ಜರ್ಮನಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಭಾರೀ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್‌: ಜರ್ಮನಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಭಾರೀ ಹೆಚ್ಚಳ

ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಕೊರೋನಾ ಪ್ರಕರಣ ಹೆಚ್ಚಳವನ್ನು ಕಂಡಿದೆ. ಜರ್ಮನಿಯಲ್ಲೂ ಕೂಡ ಸಾಂಕ್ರಾಮಿಕದ ರೋಗದ ಅಟ್ಟಹಾಸ ಹೆಚ್ಚಾಗಿದ್ದು, 33,949 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಇದು ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಗರಿಷ್ಠ ದೈನಂದಿನ ಹೆಚ್ಚಳವಾಗಿದೆ.

ಯುರೋಪ್ ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಳವಾಗುತ್ತಿದ್ದು, ತೀವ್ರ ಆತಂಕವನ್ನುಂಟು ಮಾಡಿದೆ. ಸೋಮವಾರ ಜರ್ಮನಿಯ ಕೆಲವು ಭಾಗಗಳಲ್ಲಿ ಇದುವರೆಗಿನ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಡಿಸೆಂಬರ್ 18 ರಂದು 33,777 ಪ್ರಕರಣಗಳು ದಾಖಲಾಗಿದ್ದು, ಈ ಹಿಂದಿನ ದಾಖಲೆಯಾಗಿತ್ತು.

ಜರ್ಮನ್ ನ ರಾಜ್ಯಗಳು ವಯಸ್ಸಾದವರಿಗೆ ಬೂಸ್ಟರ್ ಶಾಟ್ ನೀಡುವಲ್ಲಿ ವೇಗವಾಗಿ ಪ್ರಗತಿ ಸಾಧಿಸುವ ಅಗತ್ಯವಿದೆ. ಇದನ್ನು ಬಹಳ ಹಿಂದೆಯೇ ಕೊಡಬೇಕಾಗಿತ್ತು ಎಂದು ಹಂಗಾಮಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಸಿಬ್ಬಂದಿ ಹೆಲ್ಗೆ ಬ್ರಾನ್ ಅವರು ಹೇಳಿದ್ದಾರೆ.

ಇನ್ನು ಬುಧವಾರದ ಹೊತ್ತಿಗೆ, ಜರ್ಮನಿಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 6.7% ಜನರು ಮಾತ್ರ ಬೂಸ್ಟರ್ ಶಾಟ್ ಪಡೆದಿದ್ದಾರೆ ಎಂಬುದಾಗಿ ಸಾಂಕ್ರಾಮಿಕ ರೋಗಗಳ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್‌ನ ಮಾಹಿತಿ ತಿಳಿಸಿದೆ.

ವಯಸ್ಸಾದ ವ್ಯಕ್ತಿಗಳಿಗೆ ಕೋವಿಡ್-19 ರೋಗ ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕೂಡ ಜಾಸ್ತಿಯಾಗಿರುತ್ತದೆ. ಬುಧವಾರ ವೇಳೆಗೆ 1,00,000 ರಷ್ಟು ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇಕಡಾವಾರು ಪ್ರಮಾಣ 3.62 ರಷ್ಟಿದೆ. ಅಕ್ಟೋಬರ್ ಆರಂಭದಲ್ಲಿ ಈ ಪ್ರಮಾಣ 1.65 ರಷ್ಟಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...