ಜಮ್ಮು: ಯೋಧರು ಭಾರತ ಮಾತೆಯ ಸುರಕ್ಷಾ ಕವಚ, ನಮ್ಮ ಯೋಧರ ಬಗ್ಗೆ ಇಡೀ ದೇಶದ ಜನತೆಗೆ ಹೆಮ್ಮೆಯಿದೆ ಎಂದು ಜಮ್ಮುವಿನ ನೌಶೆರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯೋಧರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಜಮ್ಮು ಪ್ರಾಂತ್ಯದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ನನ್ನ ಕುಟುಂಬದ ಜೊತೆ ದೀಪಾವಳಿ ಆಚರಿಸಲು ಬಂದಿದ್ದೇನೆ. ದೇಶದ ಸೇವೆ ಮಾಡುವುದೇ ಗೌರವದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಸಂಕಷ್ಟದ ಸ್ಥಿತಿಯಲ್ಲಿಯೂ ಯೋಧರು ದೇಶ ಸೇವೆ ಮಾಡುತ್ತಿದ್ದಾರೆ. ನಾವು ನೆಮ್ಮದಿಯಿಂದ ಇದ್ದೇವೆ. ಎಂದಾದರೆ ಅದಕ್ಕೆ ನೀವೇ ಕಾರಣ. 130 ಕೋಟಿ ಭಾರತೀಯರ ಹಾರೈಕೆ ಯೋಧರಿಗಿದೆ. ನಮ್ಮ ಶತ್ರುಗಳು ನೌಶೇರ ಆಕ್ರಮಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ಶತ್ರುಗಳಿಗೆ ಭಾರತೀಯ ಯೋಧರು ತಿರುಗೇಟು ನೀಡಿದ್ದಾರೆ ಎಂದರು.
ಹುತಾತ್ಮರಾದ ಎಲ್ಲಾ ಯೋಧರಿಗೆ ನನ್ನ ನಮನಗಳು. ಸರ್ಜಿಕಲ್ ಸ್ಟ್ರೈಕ್ ನಲ್ಲಿ ಯೋಧರು ಮಹತ್ವದ ಪಾತ್ರ ವಹಿಸಿದ್ದಾರೆ. ನೌಶೇರಾದ ಬ್ರಿಗೇಡಿಯರ್ ಮಹತ್ವದ ಪಾತ್ರವಹಿಸಿದ್ದರು. ಶೇಕಡ 65 ರಷ್ಟು ರಕ್ಷಣಾ ವಲಯದ ಉತ್ಪಾದನೆ ಭಾರತದಲ್ಲಿ ಆಗುತ್ತಿದೆ. ರಕ್ಷಣಾ ಇಲಾಖೆಯನ್ನು ಮತ್ತಷ್ಟು ಸಧೃಗೊಳಿಸಲಾಗುವುದು. ಈಗ ದೇಶದಲ್ಲಿ ಅರ್ಜುನ್ ಟ್ಯಾಂಕ್, ತೇಜಸ್ ಸಿದ್ಧವಾಗುತ್ತಿವೆ ಎಂದು ಹೇಳಿದ್ದಾರೆ.