ಹಣದ ಖರ್ಚು ಹಾಗೂ ಉಳಿತಾಯದ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದಿರುತ್ತಾರೆ. ಕೆಲವರು ಐಷಾರಾಮಿ ಬದುಕಿಗಾಗಿ ಎಲ್ಲವನ್ನೂ ಖರ್ಚು ಮಾಡಿದ್ರೆ ಮತ್ತೆ ಕೆಲವರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡ್ತಾರೆ. ಹಣದ ವಿಷ್ಯದಲ್ಲಿ ಸ್ವಲ್ಪ ಮಟ್ಟಿಗೆ ಕೈಹಿಡಿತ ಇರಬೇಕು. ಆದ್ರೆ ಚೀನಾದ ಮಹಿಳೆಯೊಬ್ಬಳ ಬಿಗಿ ಹಿಡಿತ ಎಲ್ಲರನ್ನು ಅಚ್ಚರಿಗೊಳಿಸುತ್ತದೆ.
ಚೀನಾದ ಮಹಿಳೆ ತನ್ನ ಸಂಬಳದಲ್ಲಿ ಶೇಕಡಾ 10ರಷ್ಟನ್ನು ಮಾತ್ರ ಖರ್ಚು ಮಾಡ್ತಾಳೆ. ಉಳಿದ ಹಣವನ್ನು ಉಳಿತಾಯ ಮಾಡಿ ಎರಡು ಮನೆ ಖರೀದಿ ಮಾಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಆಕೆ ಜಿಪುಣತನ ಚರ್ಚೆಯಾಗ್ತಿದೆ.
ವಾಂಗ್ ಶೆಣೈ ಹೆಸರಿನ ಮಹಿಳೆಗೆ ಇಬ್ಬರು ಮಕ್ಕಳು. ಆಕೆ ಪತಿ ಹಾಗೂ ಮಕ್ಕಳ ಜೊತೆ ವಾಸವಾಗಿದ್ದಾಳೆ. ಬಂದ ಸಂಬಳದಲ್ಲಿ ಶೇಕಡಾ 10ರಷ್ಟನ್ನು ಮಾತ್ರ ಖರ್ಚು ಮಾಡುವ ಆಕೆ, ಉಳಿದ ಹಣವನ್ನು ಉಳಿತಾಯ ಮಾಡಿದ್ದಾಳೆ. ಬಾಲ್ಯದಿಂದಲೂ ಹಣದ ಮಹತ್ವ ತಿಳಿದಿದ್ದ ಆಕೆ, ಇದ್ರಲ್ಲಿಯೇ ಖುಷಿಪಡುತ್ತಾಳೆ.
ಸೆಕೆಂಡ್ ಹ್ಯಾಂಡ್ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಆಕೆ ಬಳಸುತ್ತಾಳೆ. ಒಳ ಉಡುಪುಗಳಿಗೆ ವರ್ಷಕ್ಕೆ 100 ಯುವಾನ್ ಖರ್ಚು ಮಾಡುತ್ತಾಳೆ. ಉಳಿದ ಬಟ್ಟೆಗಳನ್ನು ತನ್ನ ಸ್ನೇಹಿತರಿಂದ ತೆಗೆದುಕೊಳ್ಳುತ್ತಾಳೆ. ಊಟಕ್ಕೆ ಹೊರಗೆ ಹೋಗುವುದಿಲ್ಲ. ಸೈಕಲ್ ನಲ್ಲಿ ಓಡಾಡ್ತಾಳೆ. 32 ವರ್ಷದ ವಾಂಗ್ ಶೆಣೈ ನಾನ್ಜಿಂಗ್ನಲ್ಲಿ ವಾಸಿಸುತ್ತಿದ್ದಾಳೆ. ಮಹಿಳೆಯರಿಗೆ ಹಣದ ಮಹತ್ವ ತಿಳಿಸುವ ಕೆಲಸವನ್ನೂ ಈಕೆ ಮಾಡ್ತಿದ್ದಾಳೆ.