ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಂದು ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಾರೆ. ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆನ್ನುವವರು ದೀಪಾವಳಿ ದಿನ ಕೆಲವೊಂದು ಕೆಲಸಗಳನ್ನು ಅವಶ್ಯಕವಾಗಿ ಮಾಡಬೇಕು.
ಬೆಳಿಗ್ಗೆ ಬೇಗ ಸ್ನಾನ ಮಾಡಿ, ಉಪವಾಸ ಶುರು ಮಾಡಬೇಕು. ಹಿರಿಯರ ಆಶೀರ್ವಾದ ಪಡೆಯಬೇಕು. ಮನೆಯನ್ನು ಅಲಂಕರಿಸಿ, ಬಾಗಿಲಿನ ಹೊರಗೆ ರಂಗೋಲಿ ಹಾಕಬೇಕು. ದೀಪಾವಳಿಯ ದಿನದಂದು ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಮಾಡಬೇಕು. ಸಾಧ್ಯವಾದ್ರೆ ಭಕ್ತರಿಗೆ ದಾನ ಮಾಡಬೇಕು.
ಸಂಜೆ ಮತ್ತೆ ಸ್ನಾನ ಮಾಡಿ ಲಕ್ಷ್ಮಿಯನ್ನು ಸ್ವಾಗತಿಸಲು ತಯಾರಿ ನಡೆಸಿ. ಮನೆ ಮುಂದೆ ರಂಗೋಲಿ ಹಾಕಿ, ಪೂಜಾ ಸ್ಥಳದಲ್ಲಿ ಲಕ್ಷ್ಮಿ ಪೋಟೋ ಇಟ್ಟು ಸ್ಥಾಪನೆ ಮಾಡಿ. ಲಕ್ಷ್ಮಿ ಪಕ್ಕದಲ್ಲಿ ಗಣೇಶನ ವಿಗ್ರಹವನ್ನು ಇಡಿ. ಧೂಪ, ದೀಪಗಳನ್ನು ಬೆಳಗಿ, ಲಕ್ಷ್ಮಿ ಪೂಜೆಯನ್ನು ಮಾಡಿ.
ಪೂಜೆಯ ನಂತರ ಮನೆಯ ಮೂಲೆಗಳಲ್ಲಿ, ಮುಖ್ಯ ಬಾಗಿಲು ಮತ್ತು ಛಾವಣಿಯ ಮೇಲೆ ದೀಪಗಳನ್ನು ಇಡಿ. ಆದರೆ ಪೂಜೆ ಮಾಡುವ ಸ್ಥಳದಲ್ಲಿ ನಾಲ್ಕು ಮುಖದ ದೀಪವನ್ನು ಹಚ್ಚಿ. ನೀರು ತುಂಬಿದ ಕಲಶ, ಅಕ್ಕಿ, ಹಣ್ಣುಗಳು, ಬೆಲ್ಲ, ಧೂಪ ಇತ್ಯಾದಿಗಳಿಂದ ಪೂಜೆ ಮಾಡಿ. ಪೂಜೆ ನಂತ್ರ ಸಿಹಿ ತಿಂಡಿಯ ಸೇವನೆ ಮಾಡಿ. ಮನೆಯವರಿಗೆ ಉಡುಗೊರೆ ನೀಡಿ. ಈ ಎಲ್ಲ ಕೆಲಸವನ್ನು ಪ್ರೀತಿಯಿಂದ ಮಾಡಿದ್ರೆ ಲಕ್ಷ್ಮಿ ಒಲಿಯುತ್ತಾಳೆಂಬ ನಂಬಿಕೆಯಿದೆ.