ಒಂದು ಕೆ.ಜಿ. ಈರುಳ್ಳಿ ದರವು 50 ರೂ. ದಾಟುವ ಆತಂಕದಲ್ಲಿದ್ದ ಜನರಿಗೆ ಸ್ವಲ್ಪ ಸಮಾಧಾನಕರ ಸಂಗತಿ ಸಿಕ್ಕಿದೆ. ಈರುಳ್ಳಿ ಬೆಲೆಯು ಕೆ.ಜಿ. 5 ರಿಂದ 12 ರೂ. ಕಡಿಮೆ ಆಗಲಿದೆ. ಯಾಕೆಂದರೆ ಹಣದುಬ್ಬರವನ್ನು ಇಳಿಕೆ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರವು ತನ್ನ ಸಂಗ್ರಹದಲ್ಲಿದ್ದ ಸುಮಾರು 1.11 ಲಕ್ಷ ಟನ್ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದಾಗಿ ದೇಶದಲ್ಲಿ, ಹಬ್ಬದ ಋುತುವಿನಲ್ಲಿ ಎದುರಾಗಿದ್ದ ಈರುಳ್ಳಿಯ ಅಭಾವವು ತಕ್ಕ ಮಟ್ಟಿಗೆ ಇಳಿಕೆ ಕಂಡಿದೆ.
ದಿಲ್ಲಿ, ಕೋಲ್ಕೊತಾ, ಲಖನೌ, ಪಾಟ್ನಾ, ರಾಂಚಿ, ಗೌಹಾಟಿ, ಭುವನೇಶ್ವರ, ಹೈದರಾಬಾದ್, ಬೆಂಗಳೂರು, ಮುಂಬೈ, ಕೊಚ್ಚಿ, ರಾಯ್‌ಪುರದ ತರಕಾರಿ ಮಾರುಕಟ್ಟೆಗಳಿಗೆ ಸರ್ಕಾರದ ಈರುಳ್ಳಿ ದಾಸ್ತಾನು ತಲುಪಿಸಲಾಗಿದೆ. ಈ ಬಗ್ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯವು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಹಬ್ಬದ ಹೊತ್ತಲ್ಲಿ ಚಿನ್ನಾಭರಣ ಖರೀದಿಸುವವರಿಗೆ ಗುಡ್ ನ್ಯೂಸ್: ಬೆಳ್ಳಿ 898 ರೂ., ಚಿನ್ನದ ದರ 375 ರೂ. ಇಳಿಕೆ
ಮಳೆಗಾಲವು ಮುಂದುವರಿದು, ಅಕ್ಟೋಬರ್ ಮೊದಲ ವಾರದಿಂದಲೂ ದೇಶಾದ್ಯಂತ ಹೆಚ್ಚಿನ ಮಳೆ ಬೀಳುತ್ತಿದ್ದ ಕಾರಣ ಈರುಳ್ಳಿ ಬೆಳೆಯು ನಷ್ಟವಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಈರುಳ್ಳಿ ದೇಶದ ತರಕಾರಿ ಮಂಡಿಗಳನ್ನು ತಲುಪಿರಲಿಲ್ಲ. ಹಾಗಾಗಿ ಅಭಾವ ಸೃಷ್ಟಿಯಾಗಿ, ಮಾರುಕಟ್ಟೆಯಲ್ಲಿದ್ದ ಈರುಳ್ಳಿ ಬೆಲೆ ಏರುಮುಖವಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿತ್ತು.
ಸದ್ಯ, ಕೆ.ಜಿ. 21 ರೂ.ಗಳಂತೆ ಈರುಳ್ಳಿಯನ್ನು ಕೇಂದ್ರ ಸರ್ಕಾರವು ಮಾರುಕಟ್ಟೆಗಳಿಗೆ ನೀಡಿದೆ. 2021-22ನೇ ಸಾಲಿನಲ್ಲಿ 2.08 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹದಲ್ಲಿ ಸರ್ಕಾರ ಇರಿಸಿಕೊಂಡಿದೆ. ಹಣದುಬ್ಬರ ಕಡಿಮೆ ಮಾಡುವ ಮುಂದಾಲೋಚನೆಯಿಂದ ಹೆಚ್ಚಿನ ಈರುಳ್ಳಿ ದಾಸ್ತಾನು ಸರ್ಕಾರದ ಸಂಗ್ರಹಾಗಾರಗಳಲ್ಲಿ ದೆ.