ನವದೆಹಲಿ: ಕಣ್ಣಿನ ಲೇಸರ್ ಶಸ್ತ್ರಚಿಕಿತ್ಸೆಗಳನ್ನು ಅತಿಹೆಚ್ಚು ಮಾಡಿದ ಸಾಧನೆಗಾಗಿ ದೆಹಲಿಯ ಡಾ. ರಾಹಿಲ್ ಚೌಧರಿ ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿದ್ದಾರೆ.
ಐ7 ಗ್ರೂಪ್ ಆಫ್ ಐ ಹಾಸ್ಪಿಟಲ್ಸ್ ನ ಸಲಹೆಗಾರ ಮತ್ತು ನಿರ್ದೇಶಕ ಡಾ. ರಾಹಿಲ್ ಚೌಧರಿ, ಭಾರತದಲ್ಲಿ ಗರಿಷ್ಠ ಸಂಖ್ಯೆಯ ಲೇಸರ್ ದೃಷ್ಟಿ ತೆಗೆಯುವ ಕಾರ್ಯವಿಧಾನಗಳನ್ನು ನಿರ್ವಹಿಸಿದ್ದಕ್ಕಾಗಿ ಗೌರವಿಸಲ್ಪಟ್ಟಿದ್ದಾರೆ.
ಭಾರತದಲ್ಲಿ ಡಾ.ರಾಹಿಲ್ ಚೌಧರಿ ಅವರು ಕಾಂಟೌರಾ ವಿಷನ್ ಅನ್ನು ಪರಿಚಯಿಸಿದ ಮೊದಲಿಗರಾಗಿದ್ದಾರೆ. ಲೇಸರ್ ದೃಷ್ಟಿ ಹೊಸ ತಂತ್ರಜ್ಞಾನವು ಹಳೆಯ ಕಾರ್ಯವಿಧಾನಗಳಿಗೆ ಹೋಲಿಸಿದರೆ ಹೆಚ್ಚು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೆ ಅವರು, AI-LenSx ಬ್ಲೇಡ್ಲೆಸ್ ಫೆಮ್ಟೊ ಲೇಸರ್ ಸರ್ಜರಿಯನ್ನೂ ಪರಿಚಯಿಸಿದ್ದಾರೆ.
ಇನ್ನು, ತನಗೆ ಪ್ರಶಸ್ತಿಗಳಿಗಿಂತ ರೋಗಿಗಳ ತೃಪ್ತಿ ಮುಖ್ಯ, ಅವರು ಜಗತ್ತನ್ನು ನೋಡಲು ಸಾಧ್ಯವಾದಾಗ ಅದಕ್ಕಿಂತ ಖುಷಿ ಬೇರೆಯಿಲ್ಲ ಎಂದು ಅವರು ಹೇಳಿದ್ದಾರೆ.