ಇಟಲಿಯ ರಸ್ತೆಯೊಂದರಲ್ಲಿ 47 ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಿದ್ದ ಕಾರನ್ನು ಸ್ಮಾರಕವನ್ನಾಗಿ ಮಾಡಲಾಗುತ್ತಿದೆ.
1974ರಲ್ಲಿ ಇಟಲಿಯ ಕೊನೆಗ್ಲಿಯಾನೊದಲ್ಲಿ ಏಂಜೆಲೊ ಫ್ರಿಗೊಲೆಂಟ್ ಅವರು ತಮ್ಮ ಪತ್ನಿ ಬರ್ಟಿಲ್ಲಾ ಮೊಡೊಲೊ ಅವರೊಂದಿಗೆ ನ್ಯೂಸ್ ಏಜೆಂಟ್ ವ್ಯಾಪಾರವನ್ನು ಶುರು ಮಾಡಿದ್ದರು. ಈ ಅಂಗಡಿಯ ಹೊರಗೆ ಲ್ಯಾನ್ಸಿಯಾ ಫುಲ್ವಿಯಾ 1962 ಕಾರನ್ನು ನಿಲ್ಲಿಸಲಾಗಿತ್ತು.
ಈ ದಂಪತಿಗಳು ನಿವೃತ್ತರಾದಾಗ, ಅವರು ಕಾರನ್ನು ಅಲ್ಲಿಯೇ ಬಿಟ್ಟಿದ್ದಾರೆ. ನಂತರ ಅದು ಪ್ರವಾಸಿ ಆಕರ್ಷಣೆಯಾಯಿತು. ಕೊನೆಗ್ಲಿಯಾನೊಗೆ ಭೇಟಿ ನೀಡುವವರು ಈ ಕಾರಿನೊಂದಿಗೆ ಸೆಲ್ಫಿ ತೆಗೆದುಕೊಳ್ಳದೆ ಅಲ್ಲಿಂದ ಹೋಗುವುದಿಲ್ಲ.
ಇಂದಿನಿಂದ ಸಾರ್ವಜನಿಕರಿಗೆ ಅಪ್ಪು ಸಮಾಧಿ ವೀಕ್ಷಣೆಗೆ ಅವಕಾಶ
ಸುಮಾರು ಐದು ದಶಕಗಳ ನಂತರ ಕಾರನ್ನು ಸ್ಥಳಾಂತರಿಸಲು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದನ್ನು ಅಕ್ಟೋಬರ್ 20 ರಂದು ಪಡುವಾದಲ್ಲಿನ ಮೋಟರ್ ಶೋಗೆ ವರ್ಗಾಯಿಸಲಾಯಿತು. ಅಲ್ಲಿ ಇತೆ ಟೈಮ್‌ಲೆಸ್ ಕ್ಲಾಸಿಕ್ ಕಾರುಗಳ ಜೊತೆಗೆ ಈ ಕಾರು ಕೂಡ ಪ್ರದರ್ಶನದಲ್ಲಿದೆ.
ಕಳೆದ 47 ವರ್ಷಗಳಲ್ಲಿ ನಿಂತಲ್ಲೇ ನಿಂತಿದ್ದ ಕಾರಿನ ಹಾನಿಯನ್ನು ಸರಿಪಡಿಸಲು ಕಾರ್ಯಾಗಾರಕ್ಕೆ ಕಳುಹಿಸಲಾಗಿದೆ. ನಂತರ, ಫುಲ್ವಿಯಾವನ್ನು ಏಂಜೆಲೋ ಮತ್ತು ಬರ್ಟಿಲ್ಲಾ ಅವರ ಮನೆಯ ಪಕ್ಕದಲ್ಲಿರುವ ಸ್ಥಳೀಯ ಶಾಲೆಯ ಹೊರಗೆ ಇರಿಸಲಾಗುತ್ತದೆ ಎಂದು ಹೇಳಲಾಗಿದೆ.