ಮದುವೆಯ ದಿನದಂದು ಕೆಲವು ವಧುಗಳಿಗೆ ತುಂಬಾ ಭಯವಿರುತ್ತದೆ. ಸರಿಯಾಗಿ ಆಹಾರವನ್ನು ಕೂಡ ಅವರು ಸೇವಿಸುವುದಿಲ್ಲ. ಆದರೆ, ಇನ್ನೂ ಕೆಲವು ತಿಂಡಿಪೋತ ವಧುಗಳು, ಮದುವೆಯ ದಿನದಂದು ಕೂಡ ತಮ್ಮ ಇಷ್ಟದ ಖಾದ್ಯ ತಿನ್ನಲು ಖಂಡಿತಾ ಮರೆಯುವುದಿಲ್ಲ. ಅಂತಹ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರತಿ ತಿಂಗಳು 1500 ರೂ.: ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ವಧುವೊಬ್ಬಳು ಇನ್ನೂ ಪೂರ್ತಿಯಾಗಿ ಸಿದ್ಧವಾಗದಿದ್ದರೂ, ಮ್ಯಾಗಿ ತಿನ್ನೋದ್ರಲ್ಲಿ ಬ್ಯುಸಿ ಆಗಿದ್ದಾಳೆ. ಈ ನಡುವೆ ಅಲ್ಲಿದ್ದವರೊಬ್ಬರು ವರ ಇನ್ನೇನು ಬರುವ ಸಮಯವಾಯ್ತು ಎಂದಾಗ ಕ್ಯಾರೆ ಎನ್ನದ ವಧುವು, ಅವನು ಕಾಯಲಿ ಬಿಡಿ ಎಂಬಂಥ ಉತ್ತರ ನೀಡಿದ್ದಾಳೆ. ವಧುವಿನ ಮಾತು ಕೇಳಿ ಅಲ್ಲಿದ್ದವರು ಗೊಳ್ಳನೆ ನಕ್ಕಿದ್ದಾರೆ.
ದಿ ಶಾದಿ ಸ್ವಾಗ್ ಎಂಬ ಇನ್ಸ್ಟಾಗ್ರಾಮ್ ಪುಟವು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ.
https://www.youtube.com/watch?v=Rfq34ZvqpXA