ನವದೆಹಲಿ: ನಮಾಮಿ ಗಂಗೆಯ ಫೇಸ್ಬುಕ್ ಪುಟದಲ್ಲಿ ಒಂದು ಗಂಟೆಯಲ್ಲಿ ಕೈಬರಹದ ಟಿಪ್ಪಣಿಗಳೊಂದಿಗೆ ಹೆಚ್ಚು ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ.
ಮಂಗಳವಾರದಿಂದ ಪ್ರಾರಂಭವಾಗುವ ಮೂರು ದಿನಗಳ ಗಂಗಾ ಉತ್ಸವ 2021ಕ್ಕೆ ಮುಂಚಿತವಾಗಿ, ದೇಶಾದ್ಯಂತ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ 12 ರ ನಡುವೆ ಹೆಚ್ಚು ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ನಮಾಮಿ ಗಂಗೆ ಫೇಸುಬುಕ್ ಪುಟ ಯೋಜಿಸಿತ್ತು.
OMG: ಮದುವೆ ಸಮಾರಂಭಗಳಿಗೆ ಬಾಡಿಗೆಗೆ ಸಿಕ್ತಾರೆ ಸಂಬಂಧಿಕರು..!
ಇದಕ್ಕೂ ಮೊದಲು, ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (ಎನ್ಎಂಸಿಜಿ), ಗಂಗಾ ಪ್ರೇಮಿಗಳು, ಸಂರಕ್ಷಣಾವಾದಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಕೈಬರಹದ ಕವಿತೆ ಅಥವಾ ಆತ್ಮಚರಿತ್ರೆ ಅಥವಾ ಲೇಖನದೊಂದಿಗೆ ಸಂದೇಶವನ್ನು ಸಿದ್ಧಪಡಿಸುವಂತೆ ಹೇಳಿತ್ತು. ಇದಕ್ಕೆ ಜನರು ಅಭೂತಪೂರ್ವಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೇವಲ ಒಂದು ಗಂಟೆಯಲ್ಲಿ ಅತಿ ಹೆಚ್ಚು ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಹೀಗಾಗಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರವಾಗಿದೆ.