ಮೇಷ :ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯ ಮೂಡುವಂತಹ ಪ್ರಸಂಗ ಎದುರಾಗಲಿದೆ. ಅನಿರೀಕ್ಷಿತ ಮೂಲಗಳಿಂದ ಹಣ ಹರಿದು ಬರಲಿದೆ.
ವೃಷಭ : ಹಣ ಗಳಿಕೆ ಮಾಡಲು ಹೊಸ ದಾರಿಯನ್ನು ಕಂಡುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯಿಂದ ನಿಮಗೆ ಲಾಭವಿದೆ. ದಾಂಪತ್ಯ ಜೀವನದಲ್ಲಿ ಕ್ರೋಧಕ್ಕೆ ಬುದ್ಧಿ ನೀಡಬೇಡಿ. ಆದಷ್ಟು ಶಾಂತಿಯಿಂದ ವರ್ತಿಸಿ. ದೈವಾನುಗ್ರಹವಿದೆ.
ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಹಸು ಮಾಡಿದ್ದೇನು ಗೊತ್ತಾ…..?: ವಿಡಿಯೋ ವೈರಲ್
ಮಿಥುನ : ಅನಿರೀಕ್ಷಿತ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಕಿರಿಯ ಸಹೋದ್ಯೋಗಿಗಳ ನೀವು ವರ್ತಿಸುವ ರೀತಿ ಪ್ರಶಂಸೆಗೆ ಪಾತ್ರವಾಗಲಿದೆ. ವಿದ್ಯಾರ್ಥಿಗಳಿಗೆ ಅಂದುಕೊಂಡ ಗುರಿಯನ್ನು ಸಾಧಿಸಲು ಗುರುಗಳು ಸಹಾಯ ಮಾಡಲಿದ್ದಾರೆ.
ಕಟಕ : ಹಣ ಗಳಿಸಬೇಕೆಂದು ದುರ್ವ್ಯವಹಾರಕ್ಕೆ ಕೈ ಹಾಕದಿರಿ. ಉದ್ಯೋಗಕ್ಕಾಗಿ ಅರಸುತ್ತಿರುವವರಿಗೆ ದೀಪಾವಳಿ ಬಳಿಕ ಶುಭವಿದೆ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕದೇ ಬೇರೆ ದಾರಿಯಿಲ್ಲ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಸಿಂಹ : ಮನೆಯ ಪೀಠೋಪಕರಣಗಳ ಖರೀದಿಗೆ ಹೆಚ್ಚು ಖರ್ಚು ಮಾಡುವಿರಿ. ಉದ್ಯೋಗದ ವಿಚಾರದಲ್ಲಿ ಇದ್ದ ಎಲ್ಲಾ ತೊಡಕುಗಳು ಮಂಜಿನಂತೆ ಕರಗಲಿದೆ. ದೇವಸ್ಥಾನಗಳಿಗೆ ಭೇಟಿ ನೀಡಲಿದ್ದೀರಿ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ.
ಕಾಂಗ್ರೆಸ್ ಪಕ್ಷಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಧಿಕೃತ ರಾಜೀನಾಮೆ; ರಾಜೀನಾಮೆ ಪತ್ರದುದ್ದಕ್ಕೂ ಸಿಧು ವಿರುದ್ಧ ಆಕ್ರೋಶ
ಕನ್ಯಾ : ನಿಮ್ಮ ಪ್ರಾಮಾಣಿಕತೆಯನ್ನು ಗಮನಿಸಿ ಕಚೇರಿಯಲ್ಲಿ ನಿಮಗೆ ಬಡ್ತಿ ನೀಡುವ ಬಗ್ಗೆ ಯೋಚಿಸಲಿದ್ದಾರೆ. ಹೊಸ ಮೂಲಗಳಿಂದ ಧನಾಗಮನವಾಗಲಿದೆ. ಕೃಷಿಕರಿಗೆ ಲಾಭವಿದೆ. ಪುತ್ರಿಯ ದಾಂಪತ್ಯ ಜೀವನದಲ್ಲಿ ಮೂಡಿದ ವಿರಸದಿಂದಾಗಿ ಚಿಂತೆಗೆ ಒಳಗಾಗುವಿರಿ.
ತುಲಾ : ಮನೆಯಲ್ಲಿ ಇಂದು ಚಿನ್ನಾಭರಣ ಖರೀದಿ ಮಾಡಲಿದ್ದಾರೆ. ಕೃಷಿಕರಿಗೆ ಇದ್ದ ತೊಂದರೆಗಳು ದೂರಾಗಲಿವೆ. ಧನಲಾಭವಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರಲಿದೆ.
ವೃಶ್ಚಿಕ : ಮೇಲಾಧಿಕಾರಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ಉದ್ಯೋಗಕ್ಕೆ ಅರಸಿ ಕುಳಿತ ನಿಮಗೆ ಒಮ್ಮೆಲೆ ಮೂರ್ನಾಲ್ಕು ಅವಕಾಶಗಳು ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಪುತ್ರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಧನು : ಹೊಸ ಉದ್ಯಮವನ್ನು ಪ್ರಾರಂಭಿಸುವ ಮುನ್ನ ಅನುಭವಸ್ಥರಿಂದ ಸಲಹೆ ಪಡೆದುಕೊಳ್ಳಿ. ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಶ್ರಮ ಪಡಬೇಕಾದ ಅನಿವಾರ್ಯತೆ ಇರಲಿದೆ. ಸಂಗಾತಿಯ ಜೊತೆ ಅನಗತ್ಯ ವಾದ ಬೇಡ. ಇದರಿಂದ ನಿಮ್ಮ ನೆಮ್ಮದಿಯೇ ಹಾಳಾಗಲಿದೆ.
ಹವಾಮಾನ ಸಮ್ಮೇಳನದಲ್ಲಿ ತೂಕಡಿಸಿದ ಅಮೆರಿಕಾ ಅಧ್ಯಕ್ಷ: ವಿಡಿಯೋ ವೈರಲ್
ಮಕರ : ನೌಕರಿ ಬದಲಾವಣೆ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡುವುದು ಒಳ್ಳೆಯದು. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಇದೆ. ಪೋಷಕರೊಂದಿಗೆ ಅನಗತ್ಯ ವಾದಕ್ಕೆ ಇಳಿಯಬೇಡಿ.
ಕುಂಭ : ಉದ್ಯಮದಲ್ಲಿ ಲಾಭ ಹೊಂದಬೇಕು ಅಂದರೆ ಹೆಚ್ಚಿನ ಪ್ರಯತ್ನ ಅತ್ಯಗತ್ಯ. ಪರಸ್ತ್ರೀಯರೊಂದಿಗೆ ಅನಗತ್ಯ ವಾದ ಸಲ್ಲದು. ನಿರುದ್ಯೋಗದಿಂದ ಬಳಲಿದ ನಿಮಗೆ ಶುಭ ದಿನಗಳು ಸಮೀಪಿಸಲಿದೆ. ಕೋಪದ ಕೈಗೆ ಬುದ್ಧಿ ನೀಡಬೇಡಿ.
ಮೀನ : ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಆದಷ್ಟು ಬೆಂಕಿಯಿಂದ ದೂರವೇ ಇರಿ. ಸ್ನೇಹಿತರು ನಿಮ್ಮ ಆರ್ಥಿಕ ಸಂಕಷ್ಟಗಳಿಗೆ ನೆರವಾಗಲಿದ್ದಾರೆ. ಅನಗತ್ಯ ಖರ್ಚು ಒಳ್ಳೆಯದಲ್ಲ.