ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ ಇಂದು ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಆಗಮಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಆಗಮಿಸಿದ ನಾಗಾರ್ಜುನ, ಪುನೀತ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ಪುನೀತ್ ಅಗಲಿಕೆ ನಂಬಲು ಸಾಧ್ಯವಾಗುತ್ತಿಲ್ಲ.
ಅವರು ಇಲ್ಲಿಯೇ ಎಲ್ಲೋ ಇದ್ದಾರೆ ಎನಿಸುತ್ತಿದೆ. ನಟನೆ ಮಾತ್ರವಲ್ಲ, ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಒಳ್ಳೆಯ ವ್ಯಕ್ತಿ. ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದವರು. ಅಂಥಹ ವ್ಯಕ್ತಿಯನ್ನು ದೇವರು ಇಷ್ಟು ಬೇಗ ಯಾಕೆ ಕರೆದುಕೊಂಡು ಹೋದರು ಎನಿಸುತ್ತಿದೆ. ಸದಾ ಒಳ್ಳೆಯ ಚಿಂತನೆ, ಎಲ್ಲರಿಗೂ ಸ್ಫೂರ್ಥಿ, ಮಾದರಿಯಾಗಿದ್ದ ಪವರ್ ಸ್ಟಾರ್ ಇಲ್ಲ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಎಂದು ಕಂಬನಿ ಮಿಡಿದರು.
ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ನವೆಂಬರ್ 6 ರ ವರೆಗೆ ಇಡಿ ವಶಕ್ಕೆ
ಪುನೀತ್ ಕುಟುಂಬಕ್ಕೆ, ಶಿವಣ್ಣನಿಗೆ ಏನೆಂದು ಸಾಂತ್ವನ ಹೇಳಬೇಕು ಗೊತ್ತಾಗುತ್ತಿಲ್ಲ. ಅಭಿಮಾನಿಗಳಿಗೆ, ಕರ್ನಾಟಕದ ಜನತೆಗೆ ಹಾಗೂ ಪುನೀತ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.