ಹುಟ್ಟಿ-ಬೆಳೆದ ಪ್ರದೇಶದ ಭಾಷೆ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ. ಬೇರೆ ಎಷ್ಟೇ ಭಾಷೆ ಕಲಿತಿರಲಿ, ಕನಸಿನಲ್ಲಿ ಎಬ್ಬಿಸಿ ಕೇಳಿದ್ರೆ ಅವರು ಆಡುವುದು ಮಾತೃಭಾಷೆಯನ್ನು. ಹಾಗೆ ಬೇರೆ ಭಾಷೆಗಳನ್ನು ಮಾತೃಭಾಷೆ ದಾಟಿಯಲ್ಲಿ ಹೇಳುವವರಿದ್ದಾರೆ. ಆದ್ರೆ ಅಮೆರಿಕನ್ ಮಹಿಳೆಯೊಬ್ಬಳ ನಡೆ ಅಚ್ಚರಿಗೆ ಕಾರಣವಾಗಿದೆ.
ಮಹಿಳೆ ಎಂದೂ ನ್ಯೂಜಿಲ್ಯಾಂಡ್ ಗೆ ಹೋಗಿಲ್ಲ. ಆದ್ರೆ ರಸ್ತೆ ಅಪಘಾತದ ನಂತ್ರ 2 ವಾರ ಕೋಮಾದಲ್ಲಿದ್ದಳು. ಕೋಮಾದಿಂದ ಹೊರ ಬರ್ತಿದ್ದಂತೆ ನ್ಯೂಜಿಲ್ಯಾಂಡ್ ಉಚ್ಚಾರಣೆ ಶುರು ಮಾಡಿದ್ದಾಳೆ. ಲಾಸ್ ಏಂಜಲೀಸ್‌ನ 24 ವರ್ಷದ ಸಮ್ಮರ್ ಡಯಾಜ್, ಕಳೆದ ವರ್ಷ ನವೆಂಬರ್ 25 ರಂದು ಕೆಲಸದಿಂದ ಮನೆಗೆ ಮರಳುತ್ತಿದ್ದಾಗ ರಸ್ತೆ ಅಪಘಾತಕ್ಕೊಳಗಾಗಿದ್ದಳು. ಅಪಘಾತದ ನಂತ್ರ ಎರಡು ವಾರಗಳ ಕಾಲ ಕೋಮಾದಲ್ಲಿದ್ದಳು. ಆ ದಿನ ನಡೆದ ಯಾವುದೇ ಘಟನೆ ಆಕೆಗೆ ನೆನಪಿಲ್ಲ.
ಉದ್ಯೋಗಿ ಸಾವಿನ ಬಳಿಕವೂ ಕುಟುಂಬಕ್ಕೆ ಸಿಗುತ್ತೆ ʼಪಿಂಚಣಿʼ
ಕೋಮಾದಿಂದ ಎಚ್ಚರವಾದ ಮಹಿಳೆಗೆ ಮೊದಲು ಮಾತನಾಡಲು ಸಾಧ್ಯವಾಗಲಿಲ್ಲ. ಸಂಕೇತ ಭಾಷೆ ಬಳಸುತ್ತಿದ್ದವಳು ನಿಧಾನವಾಗಿ ಧ್ವನಿ ಹೊರಡಿಸಲು ಶುರು ಮಾಡಿದ್ದಳು. ಆದ್ರೆ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಅನೇಕರು ಆಕೆ ಮಾತಿನ ಉಚ್ಛಾರಣೆ ನೋಡಿ ದಂಗಾಗಿದ್ದರು. ನೀವು ಎಲ್ಲಿಯವರು ಎಂದು ಪ್ರಶ್ನೆ ಶುರು ಮಾಡಿದ್ದರು. ಅಮೆರಿಕಾದಲ್ಲಿ ಹುಟ್ಟಿ ಬೆಳೆದಿದ್ದು ಎಂದು ಸಮ್ಮರ್ ಹೇಳಿದ್ರೂ ಅವರು ನಂಬಿರಲಿಲ್ಲ. ಕೊನೆಯಲ್ಲಿ ಸಮ್ಮರ್ ಗೆ ಫಾರಿನ್ ಆಕ್ಸೆಂಟ್ ಸಿಂಡ್ರೋಮ್ ಎಂಬ ಅಪರೂಪದ ಖಾಯಿಲೆಯಿದೆ ಎಂಬುದು ಗೊತ್ತಾಗಿದೆ. ಮೆದುಳಿನ ಗಾಯದಿಂದ ವ್ಯಕ್ತಿ ಮಾತನಾಡುವ ಶೈಲಿಯಲ್ಲಿ ಬದಲಾವಣೆಯಾಗುತ್ತದೆ.